ಸಾಮಾಜಿಕ ಜಾಲತಾಣವಾದ ಟೆಲಿಗ್ರಾಮಿನಲ್ಲಿ ಬಂದ ಸಂದೇಶ ನಂಬಿ ಅಶೋಕೆಯ ವಿನೋದ ಜೋಶಿ 13 ಲಕ್ಷ ರೂ ಕಳೆದುಕೊಂಡಿದ್ದಾರೆ.
ಆನ್‌ಲೈನ್ ಟ್ರೇಡಿಂಗ್ ಬಗ್ಗೆ ಮಾಹಿತಿ ಪಡೆಯಲು ವಿನೋದ ಜೋಶಿ (34) ಟೆಲಿಗ್ರಾಂ ಗುಂಪಿಗೆ ಸೇರಿದ ಅವರು ಅಲ್ಲಿ ಯಧು ಶರ್ಮಾ, ಭರತ್ ಕದಂ ಎಂಬಾತರನ್ನು ಪರಿಚಯಿಸಿಕೊಂಡರು. ಅವರು ಹೇಳಿದ ಪ್ರಕಾರ ಎಲ್ಲಾ ನಿಯಮ ಪಾಲಿಸಿದರು.
ಕೊನೆಗೆ ಅತ್ಯಧಿಕ ಹಣ ಮಾಡುವ ಆಸೆಯಿಂದ ಜನವರಿ 2ರಂದು 1363400ರೂ ಹೂಡಿಕೆ ಮಾಡಿದರು. ಯಾವುದೇ ಲಾಭ ಬಾರದ ಕಾರಣ ಹಣ ಮರಳಿ ಪಡೆಯುವ ಪ್ರಯತ್ನ ನಡೆಸಿದರು.
ಆದರೆ, ಅವರ ಹಣ ಮರಳಿ ಸಿಗಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಅವರನ್ನು ಟೆಲಿಗ್ರಾಮಿನ ಗುಂಪಿನಿoದ ಬ್ಲಾಕ್ ಮಾಡಿ ಹೊರ ದಬ್ಬಲಾಯಿತು. ಮೋಸ ಹೋಗಿರುವುದನ್ನು ಅರಿತ ಅವರು ಕಾರವಾರದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದರು.