6
  • Latest
A guest treat from Vipa members BJP party at MLC house!

MLC ಮನೆಯಲ್ಲಿ ಬಿಜೆಪಿ ಪಾರ್ಟಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

MLC ಮನೆಯಲ್ಲಿ ಬಿಜೆಪಿ ಪಾರ್ಟಿ!

AchyutKumar by AchyutKumar
in ರಾಜಕೀಯ
A guest treat from Vipa members BJP party at MLC house!

ಪರಿಶಿಷ್ಟ ಸಮುದಾಯದವರ ಸಮಸ್ಯೆ ಅರಿತು ಅದಕ್ಕೆ ಸ್ಪಂದಿಸುವುದಕ್ಕಾಗಿ ಭಾರತೀಯ ಜನತಾ ಪಾರ್ಟಿ `ಸಂವಿಧಾನ ಗೌರವ ಅಭಿಯಾನ’ ಎಂಬ ಕಾರ್ಯಕ್ರಮ ಆಯೋಜಿಸಿದೆ. ಈ ಹಿನ್ನಲೆ ಬಿಜೆಪಿ ವರಿಷ್ಠರು ವಿ ಪ ಸದಸ್ಯ ಶಾಂತರಾಮ ಸಿದ್ಧಿ ಅವರ ಮನೆಗೆ ತೆರಳಿ `ಜೈ ಭೀಮ್’ ಘೋಷಣೆ ಮೊಳಗಿಸಿದ್ದಾರೆ.

ರಾಜ್ಯದ ಎಲ್ಲಾ ಕಡೆ `ಸಂವಿಧಾನ ಗೌರವ ಅಭಿಯಾನ’ ನಡೆಯುತ್ತಿದೆ. ಅದರ ಪ್ರಕಾರ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಅವರು ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಅವರ ಮನೆಯಲ್ಲಿ ಈ ಕಾರ್ಯಕ್ರಮ ನಡೆಸಲು ಉದ್ದೇಶಿಸಿದ್ದು, ಸಂಘಟನೆ ಮೂಲಕ ಅದನ್ನು ಯಶಸ್ವಿಯಾಗಿಸಿದ್ದಾರೆ. ಸಂವಿಧಾನ ಗೌರವ ಅಭಿಯಾನದೊಂದಿಗೆ `ಭೀಮ ಸಂಗಮ’ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಹಲವು ಸಾಧಕರಿಗೆ ಈ ವೇದಿಕೆಯಲ್ಲಿ ಸನ್ಮಾನಿಸಲಾಗಿದೆ.

ವಿಪ ಸದಸ್ಯರಿಂದ ಅತಿಥಿ ಸತ್ಕಾರ!
ಮನೆಗೆ ಬಂದ ಎಲ್ಲರನ್ನು ವಿಪ ಸದಸ್ಯ ಶಾಂತರಾಮ ಸಿದ್ದಿ ಆತ್ಮೀಯವಾಗಿ ಬರಮಾಡಿಕೊಂಡರು. ಹಿಂದುಳಿದ ಸಮುದಾಯದವರು ಹೆಚ್ಚಿಗೆ ವಾಸಿಸುವ ಗ್ರಾಮೀಣ ಪ್ರದೇಶಕ್ಕೆ ಬಿಜೆಪಿಯ ನಾಯಕರು ಆಗಮಿಸಿದಕ್ಕಾಗಿ ಅವರು ಸಂತಸವ್ಯಕ್ತಪಡಿಸಿದರು. ಊರಿನ ಅಭಿವೃದ್ಧಿ ವಿಷಯಗಳ ಬಗ್ಗೆ ಪಕ್ಷದ ವರಿಷ್ಠರಲ್ಲಿ ಚರ್ಚಿಸಿದರು. ತಮ್ಮ ಮನೆ-ಪರಿಸರವನ್ನು ಪರಿಚಯಿಸಿದ ಅವರು ಎಲ್ಲರಿಗೂ ಶಿರಾ-ಉಪ್ಪಿಟ್ಟು ವಿತರಿಸಿ ಸತ್ಕರಿಸಿದರು.

ಸಭೆ-ಸನ್ಮಾನ
ಅಂಬೇಡ್ಕರ್ ಅವರ ರಾಷ್ಟ್ರೀಯ ಸಮಗ್ರತೆ, ರಾಷ್ಟ್ರೀಯತೆಯ ಬಗ್ಗೆ ಈ ವೇಳೆ ಶಾಂತರಾಮ ಸಿದ್ದಿ ಅವರು ಸಮಗ್ರವಾಗಿ ಮಾತನಾಡಿದರು. ಸಂವಿಧಾನ ನೀತಿ, ರಾಷ್ಟಭಕ್ತಿ ಹಾಗೂ ದೇಶಕ್ಕಾಗಿ ಅಂಬೇಡ್ಕರ್ ಅವರು ನೀಡಿದ ಕೊಡುಗೆಗಳನ್ನು ಅವರು ಸ್ಮರಿಸಿದರು. ಬಿ ಆರ್ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿದ ಅಪಮಾನದ ಬಗ್ಗೆಯೂ ಶಾಂತರಾಮ ಸಿದ್ದಿ ಅವರು ನೆರೆದಿದ್ದವರಿಗೆ ಮನವರಿಕೆ ಮಾಡಿದರು. ಈ ವೇದಿಕೆಯಲ್ಲಿ ಕಂಪ್ಲಿ ಗ್ರಾ ಪಂ ಅಧ್ಯಕ್ಷೆ ರೇಣುಕಾ ಭೋವಿವಡ್ಡರ್ ಅವರನ್ನು ಬಿಜೆಪಿಗರು ಸನ್ಮಾನಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ `ಭೀಮ್ ಆಫ್’ ಕುರಿತು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ರೂಪಿಸಿದ ಯೋಜನೆಗಳ ಬಗ್ಗೆ ಅವರು ವಿವರಿಸಿದರು. ಅಂಬೇಡ್ಕರ ಸಂಶೋಧನಾ ಕೇಂದ್ರ, ಪಂಚತೀರ್ಥ ಕ್ಷೇತ್ರ ಅಭಿವೃದ್ಧಿ ವಿಷಯಗಳ ಕುರಿತು ಅವರು ವಿವರಿಸಿದರು. ಬಾಬಾ ಸಾಹೇಬ್ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಶುರುವಾಯಿತು. ಬಿಜೆಪಿ ಮುಖಂಡ ಉಮೇಶ್ ಭಾಗ್ವತ ಅಂಬೇಡ್ಕರ ಅವರ ದೂರದೃಷ್ಠಿಯ ಚಿಂತನೆಗಳ ಬಗ್ಗೆ ಮಾತನಾಡಿದರು.

ಈ ಸಭೆಯಲ್ಲಿ ಬಿಜೆಪಿ ಜಿಲ್ಲಾ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಲಿಂಗಯ್ಯ ಹಿರೇಮಠ, ಜಿ ಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ, ಬಿಜೆಪಿ ಎಸ್ ಟಿ ಮೋರ್ಚಾ ಅಧ್ಯಕ್ಷ ಸುರೇಶ ಸಿದ್ದಿ, ಮದನೂರು ಗ್ರಾ ಪಂ ಅಧ್ಯಕ್ಷ ವಿಠ್ಠು ಶೆಲ್ಕೆ, ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗರಾಜ ಭೋವಿವಡ್ಡರ, ಕಾರ್ಯದರ್ಶಿ ಮಂಜುನಾಥ ಕೆ, ಬಿಜೆಪಿ ಮಂಡಳ ಕಾರ್ಯಕಾರಿಣಿ ಕಾರ್ಯದರ್ಶಿ ರಾಜೇಶ್ ಉಪ್ಪಾರ, ಮಹೇಶ ದೇಸಾಯಿ, ಬಿಜೆಪಿ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವಿ ದೇವಡಿಗ, ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಪತ್ರೇಕರ, ಶಕ್ತಿ ಕೇಂದ್ರ ಪ್ರಮುಖರಾದ ನಾಗೇಂದ್ರ ಹೆಗಡೆ ಇನ್ನಿತರರು

ಬಿಜೆಪಿ ಮಂಡಳ ಪ್ರಧಾನ ಕಾರ್ಯದರ್ಶಿಗಳಾದ ನಟರಾಜ ಗೌಡ ನಿರ್ವಹಿಸಿದರು. ರವಿ ಕೈಟ್ಕರ ವಂದಿಸಿದರು.

ShareSendTweetShare
Previous Post

ಆ ಊರಿಗೆ ಅಲ್ಲಿನ ಯುವಕರೇ ಪೊಲೀಸರು!

Next Post

ದೋಸೆ ಅಂಗಡಿಗೆ ನುಗ್ಗಿದ ಈರುಳ್ಳಿ ಗಾಡಿ!

Next Post

ದೋಸೆ ಅಂಗಡಿಗೆ ನುಗ್ಗಿದ ಈರುಳ್ಳಿ ಗಾಡಿ!

ಹಣಕಾಸಿನ ಅಪರಾತಪರ: ಸೇಫ್ ಸ್ಟಾರ್ ಸೌಹಾರ್ದ ಸೇಫ್ ಆಗಿದೆಯಾ ?

ವಾಂತಿ-ಬೇದಿಯಿoದ ಆಸ್ಪತ್ರೆಗೆ ದಾಖಲಾದ ಜನ: ಕುಡಿಯುವ ನೀರಿಗೆ ಕೊಳಚೆ ಮಿಶ್ರಣ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.