6
  • Latest

ಸೊಸೈಟಿ ವ್ಯವಹಾರ: ವ್ಯವಸ್ಥಾಪಕರು ಮಾಡಿದ ತಪ್ಪಿಗೆ ಗುಮಾಸ್ತನಿಗೆ ಏಟು!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ADVERTISEMENT
  • Home
Saturday, July 25, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸೊಸೈಟಿ ವ್ಯವಹಾರ: ವ್ಯವಸ್ಥಾಪಕರು ಮಾಡಿದ ತಪ್ಪಿಗೆ ಗುಮಾಸ್ತನಿಗೆ ಏಟು!

AchyutKumar by AchyutKumar
in ಸ್ಥಳೀಯ

ಸೊಸೈಟಿ ಸೂಪರ್‌ಮಾರ್ಟಿನಲ್ಲಿ ಖರೀದಿಸಿದ ವಸ್ತುವಿನ ಬಿಲ್ ವ್ಯತ್ಯಾಸವಾಗಿದ್ದರಿಂದ ಶಿರಸಿಯ ವಾನಳ್ಳಿ ಜಡ್ಡಿಗದ್ದೆ ಸೊಸೈಟಿಯ ಗುಮಾಸ್ತ ಗಿರೀಶ ಹೆಗಡೆ ಪೆಟ್ಟು ತಿಂದಿದ್ದಾರೆ!

ಶಿರಸಿ ವಾನಳ್ಳಿಯ ಗಿರೀಶ ಹೆಗಡೆ (26) ಅವರು ಮೆಣಸಿ ಸೀಮೆಯ ವಾನಳ್ಳಿ ಸೇವಾ ಸಹಕಾರಿ ಸಂಘದ ಉದ್ಯೋಗಿ. ಅವರು ಜಡ್ಡಿಗದ್ದೆಯ ಸೊಸೈಟಿ ಸೂಪರ್ ಮಾರ್ಕೇಟಿನಲ್ಲಿ ಗುಮಾಸ್ತರಾಗಿ ಕೆಲಸ ಮಾಡಿಕೊಂಡಿದ್ದಾರೆ. ಜನವರಿ 28ರ ಸಂಜೆ ಸೊಸೈಟಿಗೆ ಬಂದ ಕಲಕದ್ದೆಯ ಚಾಲಕ ಸೋಮು ಬೋವಿವಡ್ಡರ್ ಅವರಲ್ಲಿ ಎರಡು ಚೀಲ ಸಿಮೆಂಟ್ ಕೊಡುವಂತೆ ಸೂಚಿಸಿದರು. ಜೊತೆಗೆ ಸಿಮೆಂಟ್ ಮೊತ್ತವನ್ನು ನಾಗು ಗೌಡ ಅವರ ಖಾತೆಗೆ ಖರ್ಚು ಹಾಕುವಂತೆ ತಿಳಿಸಿದರು. ಈ ಬಗ್ಗೆ ನಾಗು ಗೌಡ ಸಹ ಸೊಸೈಟಿಗೆ ಮಾಹಿತಿ ನೀಡಿರುವ ಬಗ್ಗೆ ಸೋಮು ಗೌಡ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗಿರೀಶ ಹೆಗಡೆ `ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಶಾಖಾ ವ್ಯವಸ್ಥಾಪಕರನ್ನು ಕೇಳಿ ಸಿಮೆಂಟ್ ಚೀಲ ಕೊಡುವೆ’ ಎಂದಿದ್ದರು. ಅದರ ಪ್ರಕಾರ ಸೊಸೈಟಿ ಶಾಖಾ ವ್ಯವಸ್ಥಾಪರಕನ್ನು ವಿಚಾರಿಸಿ, ಅವರ ಸೂಚನೆ ಪ್ರಕಾರ ಗಿರೀಶ ಹೆಗಡೆ ಅವರು ಸಿಮೆಂಟ್ ಚೀಲ ಕೊಟ್ಟು ಕಳುಹಿಸಿದ್ದರು. ಇದಕ್ಕೆ ಸಂಬoಧಿಸಿ ಬಿಲ್ ಪ್ರಿಂಟ್ ತೆಗೆದಾಗ ನಾಗು ಗೌಡ ಅವರ ಬದಲು ಬೇರೆಯವರ ಹೆಸರು ಮುದ್ರಣವಾಗಿತ್ತು. ಆ ಬಿಲ್ಲನ್ನು ಬೇರೆ ಗ್ರಾಹಕರಿಗೆ ನೀಡಿಯೂ ಆಗಿತ್ತು. ಸೋಮು ಬೋವಿವಡ್ಡರ್ ಅವರು ನಾಗು ಗೌಡರ ಖಾತೆಗೆ ಖರ್ಚು ಜಮಾ ಮಾಡುವಂತೆ ತಿಳಿಸಿದ್ದರೂ ಶಾಖಾ ವ್ಯವಸ್ಥಾಪಕರು ಕಣ್ತಪ್ಪಿನಿಂದ ಆ ಖರ್ಚನ್ನು ಬೇರೆಯವರ ಖಾತೆಗೆ ಹಾಕಿದ್ದರು.

ಈ ವಿಷಯ ಗಮನಕ್ಕೆ ಬಂದ ತಕ್ಷಣ ಗಿರೀಶ ಹೆಗಡೆ ಅವರು ಬೇರೆಯವರಿಗೆ ನೀಡಿದ ಬಿಲ್ಲನ್ನು ಹಿಂಪಡೆದು, ಅದನ್ನು ಸರಿಪಡಿಸಿ ಸೋಮು ಬೋವಿವಡ್ಡರ್ ಅವರಿಗೆ ನೀಡಿದ್ದರು. ಸಿಮೆಂಟ್ ಚೀಲ ಕೊಡಲು ತಡ ಮಾಡಿರುವುದು ಹಾಗೂ ಬಿಲ್’ನ್ನು ಬೇರೆಯವರ ಹೆಸರಿಗೆ ನೀಡಿದ ಕಾರಣ ಸಿಟ್ಟಾದ ಸೋಮು ಬೋವಿವಡ್ಡರ್ ಆ ಕ್ಷಣಕ್ಕೆ ಸೊಸೈಟಿ ಸಿಬ್ಬಂದಿಗೆ ಬೈದಿದ್ದರು. `ಉದ್ದೇಶಪೂರ್ವಕವಾಗಿ ನನಗೆ ಕಾಡಿಸುತ್ತೀಯಾ? ನಿನಗೆ ಇಲ್ಲಿ ಸರಿಯಾಗಿ ಕೆಲಸ ಮಾಡಲು ಬರುವುದಿಲ್ಲವೇ?’ ಎಂದು ಸೋಮು ಬೋವಿವಡ್ಡರ್ ಪ್ರಶ್ನಿಸಿದ್ದರು. ಆ ವೇಳೆ ಮಾತಿಗೆ ಮಾತು ಬೆಳೆದಿದ್ದು, `ಮತ್ತೊಮ್ಮೆ ಸಿಕ್ಕಾಗ ನಿನ್ನ ನೋಡಿಕೊಳ್ಳುವೆ’ ಎಂದು ಸೋಮು ಬೋವಿವಡ್ಡರ್ ಹೇಳಿ ಹೋಗಿದ್ದರು.

ಜನವರಿ 29ರಂದು ಗಿರೀಶ ಹೆಗಡೆ ಸೊಸೈಟಿ ಕೆಲಸ ಮುಗಿಸಿ ಮನೆಗೆ ಮರಳುವಾಗ ಎದುರಾದ ಸೋಮು ಬೋವಿವಡ್ಡರ್ ಅವರನ್ನು ಅಡ್ಡಗಟ್ಟಿದರು. ಹಿಂದಿನ ದಿನ ನಡೆದ ಗಲಾಟೆಯನ್ನು ಅವರು ಮರೆತಿರಲಿಲ್ಲ. ಅದೇ ಸಿಟ್ಟಿನಲ್ಲಿ ಕೂಗಾಡಿದರು. `ಸೊಸೈಟಿಗೆ ಬಂದಾಗ ನನ್ನ ಕೆಲಸ ಮಾಡಿಕೊಡದೇ ತೊಂದರೆ ಮಾಡುತ್ತೀಯಾ?’ ಎಂದು ಪ್ರಶ್ನಿಸಿ ಗಿರೀಶ ಹೆಗಡೆ ಅವರ ಬೆನ್ನ ಮೇಲೆ ಬಡಿಗೆಯಿಂದ ಬಡಿದರು. ಇದಲ್ಲದೇ `ಬೋ.. ಮಗನೆ ನನ್ನ ವಿರುದ್ಧ ಕಂಪ್ಲೇಟ್ ಕೊಡುವುದಾದರೆ ಕೊಡು. ಆಗ ನಿನ್ನನ್ನು ಜೀವಸಹಿತ ಬಿಡುವುದಿಲ್ಲ’ ಎಂದು ಬೈದು ಬೆದರಿಸಿದರು. ಅದಾಗಿಯೂ ಗಿರೀಶ ಹೆಗಡೆ ಧೈರ್ಯದಿಂದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ShareSendTweetShare
Previous Post

ಹಾಲು ಹಿಂಡಿ.. ಬಹುಮಾನ ಗೆಲ್ಲಿ!

Next Post

ಬ್ಯಾಂಕು-ಸೊಸೈಟಿಗಳಿಗೆ ಇಲ್ಲ ಆರ್ಥಿಕ ಶಿಸ್ತು: ಅರ್ಬನ್ ಬ್ಯಾಂಕ್ ಠೇವಣಿದಾರರ ಸ್ಥಿತಿ ಅತಂತ್ರ!

Next Post

ಬ್ಯಾಂಕು-ಸೊಸೈಟಿಗಳಿಗೆ ಇಲ್ಲ ಆರ್ಥಿಕ ಶಿಸ್ತು: ಅರ್ಬನ್ ಬ್ಯಾಂಕ್ ಠೇವಣಿದಾರರ ಸ್ಥಿತಿ ಅತಂತ್ರ!

ಅಮವಾಸ್ಯೆ: ಮಾಟ-ಮಂತ್ರಕ್ಕೆ ಹೆದರಿದ ಮನ!

DC interested in empowering Anganwadis: Nutritional treatment for malnourished children!

ಬಂದರು ಬಳಕೆಗೆ ಡೀಸಿ ಸೂಚನೆ: ರೈತರ ಉತ್ಪನ್ನಗಳಿಗೆ ಆನ್‌ಲೈನ್ ಮಾರುಕಟ್ಟೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.