6
  • Latest

ಬ್ಯಾಂಕು-ಸೊಸೈಟಿಗಳಿಗೆ ಇಲ್ಲ ಆರ್ಥಿಕ ಶಿಸ್ತು: ಅರ್ಬನ್ ಬ್ಯಾಂಕ್ ಠೇವಣಿದಾರರ ಸ್ಥಿತಿ ಅತಂತ್ರ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬ್ಯಾಂಕು-ಸೊಸೈಟಿಗಳಿಗೆ ಇಲ್ಲ ಆರ್ಥಿಕ ಶಿಸ್ತು: ಅರ್ಬನ್ ಬ್ಯಾಂಕ್ ಠೇವಣಿದಾರರ ಸ್ಥಿತಿ ಅತಂತ್ರ!

AchyutKumar by AchyutKumar
January 30, 2025
in ಸ್ಥಳೀಯ
advt advt advt
ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ಬ್ಯಾಂಕು-ಸೊಸೈಟಿಗಳ ಹಗರಣ ಮುಂದುವರೆದಿದೆ. ಬ್ಯಾಂಕ್ ನೌಕರರೇ ಅಪರಾತಪರ ನಡೆಸಿ ಪರಾರಿಯಾಗುತ್ತಿರುವುದು ಸಾಮಾನ್ಯವಾಗಿದೆ. ಹಣಕಾಸು ಸಂಸ್ಥೆಗಳಲ್ಲಿ ಆರ್ಥಿಕ ಶಿಸ್ತು ಕೊರತೆ ಕಾರಣ ಜನ ಠೇವಣಿಯಿರಿಸಲು ಹಿಂದೆ ಮುಂದೆ ನೋಡುತ್ತಿದ್ದು, ಕಾರವಾರ ಅರ್ಬನ್ ಬ್ಯಾಂಕಿನಲ್ಲಿ ಠೇವಣಿವಿಟ್ಟವರ ಪರಿಸ್ಥಿತಿ ಚಿಂತಾಜನಕವಾಗಿದೆ.

ಕಾರವಾರ ಅರ್ಬನ್ ಬ್ಯಾಂಕ್ ಮುಳುಗಿ 9 ತಿಂಗಳು ಕಳೆದಿದ್ದು, ನೀಡಿದ ಭರವಸೆಯಂತೆ ಉಳಿತಾಯ ಖಾತೆಯಲ್ಲಿದ್ದ ಹಣ ಸಹ ಗ್ರಾಹಕರಿಗೆ ಸಿಕ್ಕಿಲ್ಲ. ಠೇವಣಿ ಇಟ್ಟವರಿಗೂ ವಿಮಾ ಪರಿಹಾರ ಸಿಕ್ಕಿಲ್ಲ. ಅದಾಗಿಯೂ ಅವ್ಯಹಾರಕ್ಕೆ ಕಾರಣವಾದ ಮಾಜಿ ಮಹಿಳಾ ಸಿಬ್ಬಂದಿಯೊಬ್ಬರು `60 ಲಕ್ಷ ವಿಮಾ ಹಣ ಬಂದಿದೆ’ ಎಂದು ಪುಕಾರು ಹಬ್ಬಿಸಿದ್ದಾರೆ. ಹೀಗಾಗಿ ಬ್ಯಾಂಕಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ವಿಮಾ ಹಣ ಕೊಡಿಸುವಾಗಲೂ ಈ ಅರ್ಬನ್ ಬ್ಯಾಂಕ್‌ನ ಕೆಲ ನಿರ್ದೇಶಕರು `ತಮ್ಮ ಸಂಬAಧಿಗಳಿಗೆ ವಿಮಾ ಹಣ ಕೊಡಿಸುತ್ತಿದ್ದು, ಇತರರನ್ನು ನಿರ್ಲಕ್ಷಿಸುತ್ತಿದ್ದಾರೆ’ ಎಂಬ ದೂರು ಕೇಳಿ ಬರುತ್ತಿದೆ.

ADVERTISEMENT
ADVERTISEMENT

ಈವರೆಗೂ ವಿಮಾ ಹಣ ಬಾರದ ಹಿನ್ನಲೆಯಲ್ಲಿ ಠೇವಣಿ ಇಟ್ಟು ಹಣ ಕಳೆದುಕೊಂಡವರು ಅತಂತ್ರರಾಗಿದ್ದಾರೆ. ಠೇವಣಿದಾರರು ನಿತ್ಯ ಬ್ಯಾಂಕಿಗೆ ಆಗಮಿಸಿ ಹಣ ಹಿಂತಿರುಗಿಸುವ ಬಗ್ಗೆ ಕೇಳುತ್ತಿದ್ದು, ಅಲ್ಲಿನ ಸಿಬ್ಬಂದಿ ಸ್ಪಂದಿಸುತ್ತಿಲ್ಲ. ಜನರ ಅಳಲು ಆಲಿಸಲು ಆ ಬ್ಯಾಂಕಿನಲ್ಲಿ ಕನ್ನಡ ಮಾತನಾಡುವ ಮ್ಯಾನೇಜರ್ ಸಹ ಇಲ್ಲ!

Advertisement. Scroll to continue reading.
Advertisement. Scroll to continue reading.

`ಎಲ್ಲರ ಹಣದ ವಿವರವನ್ನು ವಿಮಾ ಕಂಪನಿಗೆ ಕಳಿಸಲಾಗಿದೆ. ಆದರೂ ಸುಮಾರು 3 ಸಾವಿರದಷ್ಟು ಜನರ ವಿವರಗಳನ್ನು ಕಳಿಸುವುದು ಬಾಕಿ ಇದೆ’ ಎಂದು ಬ್ಯಾಂಕಿನವರು ಹೇಳುತ್ತಿದ್ದಾರೆ. `ಪ್ರತಿ ದಿನ 100ರಿಂದ 200 ಜನರ ವಿವರಗಳನ್ನು ಮಾತ್ರ ಕಳುಹಿಸಲು ಸಾಧ್ಯವಾಗುತ್ತಿದೆ. ಬರುವ ಸೋಮವಾರದ ವೇಳೆಗೆ ಬ್ಯಾಂಕಿನ ಲೆಕ್ಕಪರಿಶೋಧಕರು ಎಲ್ಲ ಕಾಗದಗಳಿಗೂ ಸಹಿ ಹಾಕುವರು’ ಎಂದು ಗ್ರಾಹಕರನ್ನು ಸಮಾಧಾನ ಮಾಡುತ್ತಿದ್ದಾರೆ. ಅದಾಗಿಯೂ ಜನ ಸಿಟ್ಟಾದಾಗ ಬ್ಯಾಂಕಿನ ಸಿಬ್ಬಂದಿ ಪೊಲೀಸರನ್ನು ಕರೆಯಿಸಿ ಜನರನ್ನು ಅಲ್ಲಿಂದ ಕಳುಹಿಸುತ್ತಿದ್ದಾರೆ.

ಬ್ಯಾಂಕಿನ ಅವ್ಯವಹಾರದ ವಿರುದ್ಧ ಜನ ಈಗಾಗಲೇ ಪೊಲೀಸ್ ದೂರು ನೀಡಿದ್ದಾರೆ. ಜಿಲ್ಲಾಡಳಿತಕ್ಕೆ ಸಹ ಮನವಿ ಸಲ್ಲಿಸಿ ಬೇಡಿಕೊಂಡಿದ್ದಾರೆ. ಅನೇಕರು ಆ ಬ್ಯಾಂಕಿನ ಬಡ್ಡಿ ಹಣದಿಂದ ಬದುಕು ಕಟ್ಟಿಕೊಂಡಿದ್ದು, ಅವರೆಲ್ಲರೂ ಸಾಲದ ಸುಳಿಗೆ ಸಿಲುಕಿ ಇನ್ನಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ.

ShareSendTweetShare
ADVERTISEMENT
Previous Post

ಸೊಸೈಟಿ ವ್ಯವಹಾರ: ವ್ಯವಸ್ಥಾಪಕರು ಮಾಡಿದ ತಪ್ಪಿಗೆ ಗುಮಾಸ್ತನಿಗೆ ಏಟು!

Next Post

ಅಮವಾಸ್ಯೆ: ಮಾಟ-ಮಂತ್ರಕ್ಕೆ ಹೆದರಿದ ಮನ!

Next Post

ಅಮವಾಸ್ಯೆ: ಮಾಟ-ಮಂತ್ರಕ್ಕೆ ಹೆದರಿದ ಮನ!

DC interested in empowering Anganwadis: Nutritional treatment for malnourished children!

ಬಂದರು ಬಳಕೆಗೆ ಡೀಸಿ ಸೂಚನೆ: ರೈತರ ಉತ್ಪನ್ನಗಳಿಗೆ ಆನ್‌ಲೈನ್ ಮಾರುಕಟ್ಟೆ!

ಅತಿಥಿ ಶಿಕ್ಷಕರ ಅಲೆದಾಟ: ಶಾಲೆಗಳಿಗೆ ನಿತ್ಯ ಸಂಕಷ್ಟ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.