ಆಸ್ಪತ್ರೆಗೆ ನುಗ್ಗಿ ವೈದ್ಯರನ್ನು ನಿಂದಿಸಿದಲ್ಲದೇ ಅವರ ವಿರುದ್ಧ ಮಾನಹಾನಿ ಮಾಡುವ ಬೆದರಿಕೆ ಒಡ್ಡಿದ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೋಮವಾರ ಸಂಜೆ ಹಳಿಯಾಳ ತಾಲೂಕಾ ಆಸ್ಪತ್ರೆ ಹಳಿಯಾಳದ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳ ಕಚೇರಿಗೆ ಮಹಿಳೆಯೊಬ್ಬರು ನುಗ್ಗಿದ್ದಾರೆ. ಆಕೆಯನ್ನು ಹಿಂಬಾಲಿಸಿಕೊoಡು ಬಂದ ಪುರುಷ ಅಲ್ಲಿ ರಂಪಾಟ ನಡೆಸಿದ್ದು, ಈ ವೇಳೆ ಅಲ್ಲಿದ್ದ ರೋಗಿಗಳೆಲ್ಲರೂ ಬೆದರಿದ್ದಾರೆ.
ಈ ಹಿನ್ನಲೆ `ಆಸ್ಪತ್ರೆಗೆ ನುಗ್ಗಿ ಗಲಾಟೆ ಮಾಡಿ, ಗದ್ದಲವೆಬ್ಬಿಸಿದವರ ವಿರುದ್ಧ ಆಸ್ಪತ್ರೆಯ ಸುಪರಿಂಟೆoಡೆoಟ್ ತೇಜಸ್ವಿನಿ ಅಶೋಕ ಪಾಲೇಕರ ಹಳಿಯಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. `ದಿವ್ಯಾ ಮಹಾಜನ್ ಹಾಗೂ ಗಣೇಶ ರಾಠೋಡ ಎಂಬಾತರು ಆಸ್ಪತ್ರೆಗೆ ನುಗ್ಗಿ ವೈದ್ಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜಾತಿ ನಿಂದನೆಯನ್ನು ಮಾಡಿದ್ದಾರೆ’ ಎಂದು ದೂರಲಾಗಿದೆ.