ಉತ್ತರ ಕನ್ನಡ ಜಿಲ್ಲೆಯಲ್ಲಿ 5 ರಾಷ್ಟ್ರೀಯ ಹೆದ್ದಾರಿಗಳಿವೆ. ಆ ಹೆದ್ದಾರಿಗಳಲ್ಲಿ 666 ಹೊಂಡಗಳಿವೆ!
ಮಾಜಾಳಿ-ಭಟ್ಕಳ, ಬಾಳೆಗುಳಿ-ಕಿರವತ್ತಿ, ಹೊನ್ನಾವರ-ಮಾವಿನಗುಂಡಿ ಹೆದ್ದಾರಿಗಳಲ್ಲಿನ ಹೊಂಡಗಳಿ0ದ ಹೆಚ್ಚಿನ ಅಪಘಾತ ನಡೆದಿದೆ. ಶಿರಸಿ-ಕುಮಟಾ ಹೆದ್ದಾರಿಯಲ್ಲಿಯೂ ಎರಡು ವರ್ಷದಲ್ಲಿ ಅಪಘಾತ ಪ್ರಮಾಣ ದುಪ್ಪಟ್ಟಾಗಿದೆ.
ಕಳೆದ 4 ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ 441 ಭಾರೀ ಪ್ರಮಾಣದ ಅಪಘಾತಗಳು ಸಂಭವಿಸಿವೆ. ಅದರಲ್ಲಿ 473 ಜನ ಮೃತಪಟ್ಟಿದ್ದಾರೆ. 498 ಜನರು ಗಾಯಗೊಂಡಿದ್ದಾರೆ.
ಉಳಿದoತೆ ಲೋಕೋಪಯೋಗಿ ಇಲಾಖೆಗೆ ಸೇರಿದ ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆಗಳಲ್ಲಿ 2022ರಿಂದ 2024ರ ಅಂತ್ಯದವರೆಗೆ 722 ಭಾರೀ ಪ್ರಮಾಣದ ಅಪಘಾತ ನಡೆದಿದೆ. ಇದರಲ್ಲಿ 768 ಸಾವನಪ್ಪಿದ್ದಾರೆ. 5104 ಜನ ಗಾಯಗೊಂಡಿದ್ದಾರೆ.
ಈ ಬಗ್ಗೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅಧಿಕೃತ ಮಾಹಿತಿ ನೀಡಿದ್ದಾರೆ. ಅವೈಜ್ಞಾನಿಕ ತಿರುವು, ಹೆದ್ದಾರಿ ಹೊಂಡದ ಬಗ್ಗೆ ಪತ್ರ ಬರೆದರೂ ಪ್ರಾಧಿಕಾರದವರು ಸ್ಪಂದಿಸದ ಬಗ್ಗೆ ಅವರು ಆಕ್ಷೇಪವ್ಯಕ್ತಪಡಿಸಿದ್ದಾರೆ.