ಅನಧಿಕೃತವಾಗಿ ಸಾಲ ನೀಡಿ ಬಡ್ಡಿ, ಚಕ್ರಬಡ್ಡಿ ಜೊತೆ ಮೀಟರ್ ಬಡ್ಡಿ ವಸೂಲಿ ಮಾಡುತ್ತಿದ್ದ ಇಬ್ಬರನ್ನು ದಾಂಡೇಲಿ ಪೊಲೀಸರು ಬಂಧಿಸಿದ್ದಾರೆ.
ಗಾಂಧಿನಗರದ ಕಂಜರಬಾಟಿನ ಕಿಶನ ಸುಭಾಸ ಕಂಜರಬಾಟ ಹಾಗೂ ವಿನೋದ ಸುರೇಶ ಮಿನೇಕರ ಬಡ್ಡಿ ದಂಧೆ ನಡೆಸುತ್ತಿರುವ ದೂರು ಬಂದ ಹಿನ್ನಲೆ ಪೊಲೀಸರು ತಪಾಸಣೆ ನಡೆಸಿದರು. ಆ ವೇಳೆ 2 ಖಾಲಿ ಇ-ಸ್ಟಾಂಪ್ ಪೆಪರ್, 6 ಚೆಕ್, ಬಾಂಡ್ ಪೆಪರ್ ಜೊತೆ ಕೈಗಡ ಸಾಲದ ಕರಾರು ಪತ್ರ ಸಿಕ್ಕಿವೆ.
ಬಡ್ಡಿ ವ್ಯವಹಾರವನ್ನು ಉದ್ದಿಮೆ ಮಾಡಿಕೊಂಡ ಆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಿಎಸ್‌ಐ ಅಮೀನಸಾಬ್ ಎಂ ಅತ್ತಾರ್ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಇಬ್ಬರನ್ನು ಸದ್ಯ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಇನ್ನಿಬ್ಬರ ಮನೆಯಲ್ಲಿಯೂ ಪೊಲೀಸರು ಶೋಧ ನಡೆಸಿದ್ದಾರೆ.





