ಐದು ಜಲ ವಿದ್ಯುತ್ ಯೋಜನೆ, ಕೈಗಾ ಅಣುಸ್ಥಾವರ, ಸೀಬರ್ಡ ನೌಕಾನೆಲೆ, ರೈಲ್ವೆ ಯೋಜನೆ, ಪ್ರಾಯೋಜಿತ ವಿಮಾನ ನಿಲ್ದಾಣ, ಸಿ ಆರ್ ಜಡ್, ಅಭಿಯಾರಣ್ಯ, ಹುಲಿ ಸಂರಕ್ಷಣಾ ವಲಯ ಸೇರಿ ಹಲವು ರಾಷ್ಟ್ರೀಯ ಯೋಜನೆಗಳಿಂದ ಭೂಮಿ ಕಳೆದುಕೊಂಡ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಇನ್ನೊಂದು ಆಘಾತ ಕಾದಿದೆ. ನಿರಾಶ್ರಿತರ ಜಿಲ್ಲೆ ಎಂದು ಹಣೆಪಟ್ಟಿ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ನೂ 1,58,613 ಕುಟುಂಬದವರು ಭೂಮಿ ಹಕ್ಕಿನಿಂದ ವಂಚಿತರಾಗುವ ಭೀತಿ ಎದುರಿಸುತ್ತಿದ್ದಾರೆ!
ವಿವಿಧ ಯೋಜನೆಗೆ ತ್ಯಾಗ ಮಾಡಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂದಾಯ ಮತ್ತು ಅರಣ್ಯ ಭೂಮಿಯಲ್ಲಿನ ವಾಸ್ತವ್ಯ ಮತ್ತು ಸಾಗುವಳಿದಾರರ ಸಮಸ್ಯೆಯ ಬಗ್ಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಧ್ವನಿ ಎತ್ತಿದ್ದಾರೆ. ಫೆ 8ರಂದು ಹೊನ್ನಾವರ ತಾಲೂಕಿನ ನಾಮಧಾರಿ ಸಂಭಾಗಣ ಮಂಟಪದಲ್ಲಿ ಸಂವಾದ ನಡೆಸಿದ ಅವರು ಈ ಕುರಿತಾದ ದಾಖಲೆಗಳನ್ನು ಪ್ರದರ್ಶಿಸಿದರು.
`ಅರಣ್ಯ ಮತ್ತು ಕಂದಾಯ ಜಮೀನಿನಲ್ಲಿ ವಾಸ್ತವ್ಯ ಮತ್ತು ಸಾಗುವಳಿಗಾಗಿ ಅವಂಲಬಿತರಾಗಿರುವ ಒಂದುವರೆ ಲಕ್ಷಕ್ಕೂ ಮಿಕ್ಕಿ ಕುಟುಂಬಗಳು ಭೂಮಿ ಮಂಜೂರಿಗಾಗಿ ಅಲೆದಾಡುತ್ತಿದ್ದಾರೆ. ಕಾನೂನು ಕುಣಕೆಯೊಳಗೆ ಸಿಕ್ಕ ಅವರು ನಿರಾಶ್ರೀತರಾಗುವ ಭೀತಿ ಎದುರುಸುತ್ತಿರುವುದು ವಿಷಾಧಕರ’ ಎಂದು ರವೀಂದ್ರ ನಾಯ್ಕ ಹೇಳಿದ್ದಾರೆ. `ಕಂದಾಯದ ವಿವಿಧ ಕಾನನೂನಿನಲ್ಲಿ ವಸತಿ ಮತ್ತು ಸಾಗುವಳಿಗಾಗಿ ನಗರ ಮತ್ತು ಗ್ರಾಮೀಣ ಭಾಗದಿಂದ ಒಟ್ಟು 73,725 ಅರ್ಜಿಗಳು ತಿರಸ್ಕಾರವಾಗಿದೆ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ 85819 ಅರ್ಜಿಗಳಲ್ಲಿ 2,852 ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದೆ’ ಎಂಬ ಮಾಹಿತಿಯನ್ನು ಅವರು ಬಿಚ್ಚಿಟ್ಟರು.
ಈ ಅಂಕಿ ಅಂಶಗಳನ್ನು ನೋಡಿ ಅಲ್ಲಿದ್ದ ಮಹೇಶ ನಾಯ್ಕ ಕಾನಕ್ಕಿ, ಸುರೇಶ ಮೇಸ್ತಾ, ರಾಮ ಮರಾಠಿ, ಗಿರೀಶ ನಾಯ್ಕ ಚಿತ್ತಾರ, ವಿನೋದ ನಾಯ್ಕ, ದಾವುದ್, ರಫೀಕ ಪ್ರಭಾತನಗರ, ಜನಾರ್ಧನ ನಾಯ್ಕ, ಗಣೇಶ ನಾಯ್ಕ, ಮಾರುತಿ ಆರ್ ನಾಯ್ಕ ಅಚ್ಚರಿಗೆ ಒಳಗಾದರು.



