`ನಾವು ಮಾಡುವ ಎಲ್ಲಾ ಕೆಲಸವನ್ನು ದೇವರು ನೋಡುತ್ತಿದ್ದು, ಅದೇ ಭಾವನೆ ನಮ್ಮಿಂದ ತಪ್ಪಾಗುವುದನ್ನು ತಡೆಯುತ್ತದೆ’ ಎಂದು ಶಿರಳಗಿ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ಶಿರಸಿಯ ಮಂಜುಗುಣಿಯಲ್ಲಿ ನಡೆಯುತ್ತಿರುವ ಉದ್ಯಾಪನಾ ಉತ್ಸವ ಪರ್ವದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ನಮ್ಮಲ್ಲಿ ಶ್ರದ್ಧಾ-ಭಕ್ತಿಯಿದ್ದರೆ ದೈವ ಸಾನಿಧ್ಯ ಜೊತೆಗಿರುತ್ತದೆ. ಭಕ್ತಿಗೆ ಆಧಾರವೇ ಶ್ರದ್ಧೆ. ಸತ್ಯವಾದನ್ನು ದೊರಕಿಸಿಕೊಡುವ ಮಾರ್ಗದಲ್ಲಿ ಮುಖ್ಯವಾದ ಪಾತ್ರವೇ ಶ್ರದ್ಧೆ. ದೇವರು, ಗುರುವಿನಲ್ಲಿ ಯಾವ ರೀತಿಯ ಭಾವನೆ ಮಾಡುತ್ತೆವೆಯೋ ಅದರ ಫಲ ಸಿಗುತ್ತದೆ. ಭಗವಂತನಿಗೆ ನಮ್ಮ ಭಾವ ಬೇಕು, ಭಾಷೆ ಮುಖ್ಯವಲ್ಲ’ ಎಂದು ಹೇಳಿದ್ದಾರೆ.
`ವ್ಯವಹಾರ ಅಥವಾ ಸಾಧನೆಯಲ್ಲಿ ಸಿಕ್ಕ ಸಾಧನೆ ನಾನು ಮಾಡಿದ್ದು ಎಂದುಕೊoಡರೆ ಅದೇ ದೊಡ್ಡ ಸೋಲು. ನನ್ನ ಸಾಧನೆಯ ಹಿಂದೆ ಶಕ್ತಿಯೊಂದಿದೆ ಎಂಬುದನ್ನು ಅರಿತರೆ ಸಾಧನೆಯ ದಾರಿ ಸದಾ ಮುಂದುವರಿಯುತ್ತದೆ’ ಎಂದು ವೇದಮೂರ್ತಿ ಶ್ರೀನಿವಾಸ ಭಟ್ ಮಂಜುಗುಣಿ ಅಭಿಪ್ರಾಯಪಟ್ಟರು.