ರಸ್ತೆ ಬದಿ ನಿಂತಿದ್ದ ಯುವಕನಿಗೆ ನಾಲ್ವರು ಸೇರಿ ಥಳಿಸಿದ್ದು, ಅದನ್ನು ಬಿಡಿಸಲು ಹೋದ ಮೂವರು ಹೊಡೆತ ತಿಂದಿದ್ದಾರೆ. ಹಲ್ಲೆ ನಡೆಸಿದ ನಾಲ್ವರು ತೆಲಗು ಮಾತನಾಡುತ್ತಿದ್ದು, ಅವರ ಪರಿಚಯ ಯಾರಿಗೂ ಇಲ್ಲ.
ಫೆ 7ರ ಸಂಜೆ ಭಟ್ಕಳದ ಮುರುಡೇಶ್ವರ ನಾಕಾದ ಬಳಿ ಮಾವಳ್ಳಿ-1 ಜನತಾ ಕಾಲೋನಿಯ ನಾಗೇಂದ್ರ ಆಚಾರಿ ಅವರನ್ನು ಅಡ್ಡಗಟ್ಟಿ ನಾಲ್ವರು ಜಗಳ ಮಾಡಿದ್ದಾರೆ. ಇದನ್ನು ಅವರ ತಮ್ಮ ವೀರೇಂದ್ರ ಆಚಾರಿ ನೋಡಿದ್ದು, ಜಗಳ ಬಿಡಿಲು ಹೋಗುವ ಮುನ್ನ ಅವರೆಲ್ಲರೂ ಸೇರಿ ನಾಗೇಂದ್ರರನ್ನು ಥಳಿಸಿದ್ದಾರೆ. ಅದಾದ ನಂತರ ರಸ್ತೆ ಪಕ್ಕ ಬಿಸಾಡಿ ಅವರನ್ನು ತುಳಿದಿದ್ದಾರೆ.
ಇದನ್ನು ನೋಡಿದ ವೀರೇಂದ್ರ ಆಚಾರಿ ದೊಡ್ಡದಾಗಿ ಬೊಬ್ಬೆ ಹೊಡೆದರು. ಆಗ, ಅಲ್ಲಿ ಅವರ ಭಾವ ಅರುಣ ಆಚಾರಿ ಹಾಗೂ ಪಕ್ಕದ ಮನೆಯ ಕೇಶವ ನಾಯ್ಕ ಓಡೋಡಿ ಬಂದರು. ನಾಗೇಂದ್ರ ಆಚಾರಿ ಅವರ ರಕ್ಷಣೆಯಲ್ಲಿ ತೊಡಗಿದ ಅವರನ್ನು ಆ ನಾಲ್ವರು ದುಷ್ಕಮಿಗಳು ಅಡ್ಡಗಟ್ಟಿದರು. ನಾಗೇಂದ್ರ ಆಚಾರಿ ಜೊತೆ ವಿರೇಂದ್ರ ಆಚಾರಿ, ಅರುಣ ಆಚಾರಿ ಹಾಗೂ ಕೇಶವ ನಾಯ್ಕ ಸಹ ಪೆಟ್ಟು ತಿಂದರು.
ಈ ವೇಳೆ ದುಷ್ಕರ್ಮಿಗಳು ತೆಲಗು ಭಾಷೆ ಮಾತನಾಡುತ್ತಿದ್ದು, ಗೋಪಿ, ಕರ್ನ, ರಾವನ ಎಂಬ ಹೆಸರು ಹೇಳುತ್ತಿದ್ದರು. ಅದೇ ಸುಳಿವಿನ ಆಧಾರದಲ್ಲಿ ಇದೀಗ ವೀರೇಂದ್ರ ಆಚಾರಿ ಪೊಲೀಸ್ ದೂರು ನೀಡಿದ್ದಾರೆ.