ಬಡತನದಲ್ಲಿ ಬೆಂದು ಬದುಕುತ್ತಿರುವ ದೇವಕ್ಕ ದೇಸಾಯಿ ಹಣ್ಣಿನ ಅಂಗಡಿ ನಡೆಸಿ ಜೀವನ ರೂಪಿಸಿಕೊಂಡಿದ್ದರು. ಅವರು ಹಣ್ಣು ಮಾರಾಟ ಮಾಡಿ ಕೂಡಿಟ್ಟ ಹಣವನ್ನು ಕಳ್ಳರು ದೋಚಿದ್ದಾರೆ.
ಮುಂಡಗೋಡು ಟಿಬೇಟಿಯನ್ ಕಾಲೋನಿಯ ಎರಡು ಹಣ್ಣಿನ ಅಂಗಡಿಗಳಲ್ಲಿನ ಹಣ ಕಳ್ಳರ ಪಾಲಾಗಿದೆ. ಟಿಬೆಟಿ ಕಾಲೋನಿಯ ಕ್ಯಾಂಪ್ ನಂಬರ್ 1ರಲ್ಲಿ ದೇವಕ್ಕ ಅವರ ಹಣ್ಣಿನ ಅಂಗಡಿಯಿದೆ. ಆ ಅಂಗಡಿಯಲ್ಲಿರಿಸಿದ್ದ 13 ಸಾವಿರ ರೂ ಕಳ್ಳತನವಾಗಿದೆ. ಶನಿವಾರ ರಾತ್ರಿ ಅಂಗಡಿಯ ಬೀಗ ಮುರಿದ ಕಳ್ಳರು ಗಲ್ಲಾ ಪೆಟ್ಟಿಗೆಯಲ್ಲಿದ್ದ ಹಣ ದೋಚಿದ್ದಾರೆ.
ಇದರೊಂದಿಗೆ ದೇವಕ್ಕ ದೇಸಾಯಿ ಅವರ ಪಕ್ಕದಲ್ಲಿದ್ದ ಬಾಷಾಸಾಬ್ ರಾಜೇಸಾಬ್ ಜಾತಗಾರ ಅವರ ಹಣ್ಣಿನ ಅಂಗಡಿಯಲ್ಲಿ ಸಹ ಕಳ್ಳತನವಾಗಿದೆ. ಇಲ್ಲಿಯೂ ಹಣ್ಣು ಮಾರಿ ಸಂಗ್ರಹಿಸಿದ್ದ 13 ಸಾವಿರ ರೂ ಕಳ್ಳರ ಪಾಲಾಗಿದೆ. ಕೂಡಿಟ್ಟ ಹಣ ಕಳ್ಳತನವಾಗಿದ್ದರಿಂದ ಈ ವ್ಯಾಪಾರಿಗಳು ನಷ್ಟ ಅನುಭವಿಸಿದ್ದು, ಕಳ್ಳರ ಕಾಟಕ್ಕೆ ಕಡಿವಾಣ ಹಾಕುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.