ಪೇಟೆಗೆ ಹೋಗಿ ಬರುವುದಾಗಿ ಹೊರಟ ದೀಕ್ಷಾ ನಾಲ್ಕು ದಿನ ಕಳೆದರೂ ಮನೆಗೆ ಮರಳಿಲ್ಲ. ಹೀಗಾಗಿ `ಮಗಳನ್ನು ಹುಡುಕಿ ಕೊಡಿ’ ಎಂದು ಅವರ ತಂದೆ ಮಲ್ಲಿಕಾರ್ಜುನ ಜೇರಟಗಿ ಪೊಲೀಸರ ಮೊರೆ ಹೋಗಿದ್ದಾರೆ.
ಕಲ್ಬುರ್ಗಿ ಜಿಲ್ಲೆಯ ಮಲ್ಲಿಕಾರ್ಜುನ ಜೇರಟಗಿ ಅವರು ಶಿರಸಿಯ ಲೋಕೋಪಯೋಗಿ ವಸತಿಗೃಹದ ಬಳಿ ವಾಸವಾಗಿದ್ದಾರೆ. ಫೆ 5ರಂದು ಅವರ ಪುತ್ರಿ ದಿಕ್ಷಾ ಜೇರಟಗಿ (27) ಅವರು ಪೇಟೆಗೆ ಹೋಗಿ ಬರುವುದಾಗಿ ಮನೆಯಿಂದ ಹೋಗಿದ್ದರು. ಮಧ್ಯಾಹ್ನ ಮನೆ ಬಿಟ್ಟ ಅವರು ಸಂಜೆಯಾದರೂ ಮರಳಿಲ್ಲ.
ಹೀಗಾಗಿ ಕುಟುಂಬದವರು ಎಲ್ಲಾ ಕಡೆ ಹುಡುಕಾಟ ನಡೆಸಿದರು. ಆದರೆ, ಎಲ್ಲಿಯೂ ಪತ್ತೆ ಆಗಲಿಲ್ಲ. ಅವರ ಫೋಟೋ ಜೊತೆ ಪೊಲೀಸ್ ಠಾಣೆಗೆ ಬಂದ ಮಲ್ಲಿಕಾರ್ಜುನ ಜೇರಟಗಿ ಮಗಳನ್ನು ಹುಡುಕಿಕೊಡುವಂತೆ ದೂರು ದಾಖಲಿಸಿದ್ದಾರೆ. ದಿಕ್ಷಾ ಅವರು ಕನ್ನಡ, ಇಂಗ್ಲಿಷ್ ಜೊತೆ ಹಿಂದಿಯನ್ನು ಮಾತನಾಡುತ್ತಾರೆ. ಪೊಲೀಸರು ಇದೀಗ ಯುವತಿಯ ಹುಡುಕಾಟದಲ್ಲಿದ್ದಾರೆ.