ಸಮಯಕ್ಕೆ ಸರಿಯಾಗಿ ಊಟ-ತಿಂಡಿ ಮಾಡದೇ ಸರಾಯಿ ಕುಡಿಯುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದ ಅಮರ್ ರಾಥೋಡ ಸಾವನಪ್ಪಿದ್ದಾರೆ.
ಮುಂಡಗೋಡಿನ ಕೂಸೂರುವಿನಲ್ಲಿ ಅಮರ ರಾಥೋಡ (56) ವಾಸವಾಗಿದ್ದರು. ಅನಾರೋಗ್ಯ ಕಾಡುತ್ತಿದ್ದರು ಅವರು ಮದ್ಯ ಸೇವನೆ ಬಿಟ್ಟಿರಲಿಲ್ಲ. ಮನೆಯವರೆಲ್ಲ ಸೇರಿ ಸರಾಯಿ ಸೇವನೆ ಮಾಡದಂತೆ ತಿಳಿಸಿದರೂ ಕೇಳುತ್ತಿರಲಿಲ್ಲ.
ಅಮರ ರಾಥೋಡ್ ಸಮಯಕ್ಕೆ ಸರಿಯಾಗಿ ಊಟ-ತಿಂಡಿಯನ್ನು ಮಾಡುತ್ತಿರಲಿಲ್ಲ. ಆರೋಗ್ಯ ಸಮಸ್ಯೆಗೆ ಔಷಧಿಯನ್ನು ಪಡೆಯುತ್ತಿರಲಿಲ್ಲ. ಹೀಗಿರುವಾಗ ಫೆ 8ರಂದು ಅವರು ಕೆಲಸಕ್ಕೆ ಹೋಗಿದ್ದರು. ತಮ್ಮದೇ ಹೊಲದಲ್ಲಿ ಕೆಲಸ ಮಾಡುವಾಗ ಕುಸಿದು ಬಿದ್ದರು.
ಪರೀಕ್ಷಿಸಿದಾಗ ಅವರು ಸಾವನಪ್ಪಿರುವುದು ಗಮನಕ್ಕೆ ಬಂದಿತು. ಮನೆ ಜನರ ಜೊತೆ ಚರ್ಚಿಸಿ ಅವರ ಮಗ ಸಂದೀಪ ರಾಥೋಡ್ ಪೊಲೀಸ್ ಪ್ರಕರಣ ದಾಖಲಿಸಿದರು.