ಮೀನುಗಾರಿಕೆಗೆ ತೆರಳಿದ್ದ ಬೀರಪ್ಪ ಅಂಬಿಗ ಅವರು ಕಾಲು ಜಾರಿ ಬಿದ್ದು ಸಾವನಪ್ಪಿದ್ದಾರೆ. ಅವರ ಶವ ಕಾರವಾರದ ಜಿಲ್ಲಾಸ್ಪತ್ರೆ ಶವಾಗಾರದಲ್ಲಿದ್ದು, ಪೊಲೀಸ್ ಪ್ರಕರಣ ದಾಖಲಿಸಿ ಅವರ ಮಗ ಶವ ಪಡೆದರು.
ಕುಮಟಾ ತಾಲೂಕಿನ ಮಿರ್ಜಾನ್ ಬಳಿಯ ತಾರಿಬಾಗಿಲಿನ ಬೀರಪ್ಪ ಅಂಬಿಗ (65) ನಿತ್ಯ ಮೀನುಗಾರಿಕೆ ನಡೆಸುತ್ತಿದ್ದರು. ಅದರ ಪ್ರಕಾರ ಫೆ 8ರಂದು ಅವರು ಮೀನುಗಾರಿಕೆಗಾಗಿ ಅಘನಾಶಿನಿ ನದಿಗೆ ಹೋಗಿದ್ದರು.
ಈ ವೇಳೆ ಕಾಲು ಜಾರಿ ಅವರು ಬಿದ್ದಿದ್ದು, ಮುಖಕ್ಕೆ ಭಾರೀ ಪ್ರಮಾಣದಲ್ಲಿ ಕಲ್ಲು ಬಡಿಯಿತು. ಆ ನೋವಿಗೆ ಅವರು ಅಸ್ವಸ್ಥರಾದರು. ತಕ್ಷಣ ಅಲ್ಲಿದ್ದವರು ಅವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿನ ವೈದ್ಯರು ಕಾರವಾರ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು.
ಅದರ ಪ್ರಕಾರ ಕಾರವಾರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಾಗ ಬೀರಪ್ಪ ಅಂಬಿಗ ಅವರು ಸಾವನಪ್ಪಿದರು. ಗೋವಾದಲ್ಲಿ ಅಡುಗೆ ಕೆಲಸ ಮಾಡುವ ಬೀರಪ್ಪ ಅಂಬಿಗ ಅವರ ಮಗ ರಾಮಚಂದ್ರ ಅಂಬಿಗ ಪ್ರಕರಣ ದಾಖಲಿಸಿ ಶವ ಪಡೆದರು.