ಗೋವಾದಿಂದ ಬೆಳಗಾವಿ ಕಡೆ ಹೋಗುತ್ತಿದ್ದ ಕಂಟೇನರ್ ಲಾರಿಯ ಬಾಗಿಲು ಒಡೆದ ಕಳ್ಳರು ಲಕ್ಷ ರೂ ಮೌಲ್ಯದ ಏಳು ಬಾಕ್ಸ್ ಗ್ಯಾಸ್ ಗುಳಿಗೆಗಳನ್ನು ಅಪಹರಿಸಿದ್ದಾರೆ. ಆಸಿಡಿಟಿ ಹಾಗೂ ಗ್ಯಾಸ್’ನಿಂದ ಬಳಲುತ್ತಿದ್ದವರಿಗೆ ನೀಡುವ ಔಷಧಿ ಅದಾಗಿದ್ದು, ಈ ಪ್ರಮಾಣದಲ್ಲಿ ಗ್ಯಾಸ್ ಗುಳುಗೆ ಅಪಹರಿಸಿದವರು ಯಾರು? ಎಂದು ಯಾರಿಗೂ ಗೊತ್ತಾಗಿಲ್ಲ.
ರಾಜಸ್ಥಾನದ ಮನೋಹರ ಸಿಂಗ್ ಅವರು 2024ರ ಡಿಸೆಂಬರ್ 14ರಂದು `ಡೈಜೆನ್ ಅಸಿಡಿಟಿ & ಗ್ಯಾಸ್ ರಿಲೀಫ್ ಟ್ಯಾಬ್ಲೆಟ್ ಆರೆಂಜ್’ ಎಂಬ ಔಷಧಿಯನ್ನು ಸಾಗಿಸುತ್ತಿದ್ದರು. ಗೋವಾದಿಂದ ಬೆಳಗಾವಿ ಕಡೆ ಹೊರಟ ಕಂಟೇನರ್ ಜೊಯಿಡಾ ಬಳಿಯ ರಾಮನರದ ತಿನ್ನೆಘಾಟ್ ಪ್ರವೇಶಿಸಿದಾಗ ದುಷ್ಕಮಿಗಳು ಆ ಕಂಟೇನರ್ ಮೇಲೆ ಕಣ್ಣು ಹಾಕಿದರು. ಚಲಿಸುತ್ತಿರುವ ಕಂಟೇನರಿನ ಬಾಗಿಲು ಒಡೆದು ಅಲ್ಲಿದ್ದ 113530ರೂ ಮೌಲ್ಯದ ಗುಳುಗೆಗಳನ್ನು ಅಪಹರಿಸಿದ್ದರು.
ಖಾನಾಪುರ ತಲುಪಿದ ನಂತರ ಕಂಟೇನರ್ ಬಾಗಿಲು ಒಡೆದಿರುವುದು ಚಾಲಕ ಮನೋಹರ ಸಿಂಗ್ ಅರಿವಿಗೆ ಬಂದಿತು. ಕೂಡಲೇ ಅವರು ಕಂಪನಿಗೆ ತಿಳಿಸಿ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಆ ದೂರು ತನಿಖೆಗಾಗಿ ಇದೀಗ ರಾಮನಗರ ಪೊಲೀಸ್ ಠಾಣೆಗೆ ವರ್ಗವಾಗಿದೆ. ಆ ಪ್ರಮಾಣದಲ್ಲಿ ಗ್ಯಾಸ್ ಗುಳಿಗೆ ಕದ್ದವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದರೆ, ಈವರೆಗೂ ಔಷಧಿ ಕದ್ದವರು ಸಿಕ್ಕಿಲ್ಲ.



