ನಮಾಜ್ ಮಾಡಲು ಮಸೀದಿಗೆ ತೆರಳಿದ ಕುಟುಂಬದ ಮೇಲೆ 18 ಜನರ ಗುಂಪು ದಾಳಿ ಮಾಡಿದೆ. ಮಸೀದಿ ಆವರಣದೊಳಗೆ ಕಾಲಿಗೆ ಹಾಕಿದ ಬೂಟು ಬಿಟ್ಟಿರುವುದು ಈ ಹೊಡೆದಾಟಕ್ಕೆ ಮೂಲ ಕಾರಣ!
ಸಿದ್ದಾಪುರ ತಾಲೂಕಿನ ಬಿಳಗಿಯ ಅಜೀಜ್ ಸಾಬ್ ಅವರು ಫೆ 7ರಂದು ಅಹಲ್ಲೆ ಸುನ್ನತ್ ಜಾಮೀಯಾ ಮಸೀದಿಗೆ ನಮಾಜ್ ಮಾಡಲು ಹೋಗಿದ್ದರು. ಅವರ ಅಣ್ಣ ಶಕತ್ ಹಾಗೂ ತಾಯಿ ಶಕೀಲಾ ಸಹ ಜೊತೆಗಿದ್ದರು. ಮಸೀದಿ ಬಾಗಿಲ ಬಳಿ ಅಜೀಜ್ ಸಾಬ್ ತಮ್ಮ ಬೂಟುಗಳನ್ನು ಬಿಟ್ಟಿದ್ದರು.
ಇದನ್ನು ಸಹಿಸದ ಅಲ್ಲಿದ್ದ ಜನ ಅದನ್ನು ಬಿಸಾಡಿದ್ದರು. ನಮಾಜ್ ಮುಗಿಸಿ ಹೊರ ಬಮದ ಅಜೀಜ್ ಸಾಬ್ `ಇಲ್ಲಿದ್ದ ಬೂಟು ಎಲ್ಲಿ?’ ಎಂದು ಪ್ರಶ್ನಿಸಿದರು. ಇದರಿಂದ ಸಿಟ್ಟಾದ ಅಲ್ಲಿದ್ದ ಜನ `ನಾವೇ ಬಿಸಾಡಿದ್ದು’ ಎಂದರು. ಇದನ್ನು ಪ್ರಶ್ನಿಸಿದ ಕಾರಣ ಅಜೀಜ್ ಅಣ್ಣ ಶಕೀಲಾ ಮೇಲೆ ಕೆಲವರು ಆಕ್ರಮಣ ಮಾಡಿದರು. ತಪ್ಪಿಸಲು ಹೋದ ತಾಯಿ ಶಕಿಲಾ ಅವರನ್ನು ಕೆಟ್ಟದಾಗಿ ನಿಂದಿಸಿದರು.
ಆ ಮೂವರಿಗೂ 18 ಜನ ಸೇರಿ ಥಳಿಸಿದರು. ಈ ಹಿನ್ನಲೆ ಅಮೀರುದ್ದಿನ್ ಸಾಬ್, ಇಲಿಯಾಸ್ ಸಾಬ್, ಮಹಮ್ಮದ್ ಸಾಬ್, ನನ್ನೆಸಾಬ್ ಇಮಾಮ್, ಅಮ್ರಾನ್ ರಪಿ, ಫೈಜಲ್ ಸಾಬ್, ಅಹಮ್ಮದ್ ಸಾಬ್, ಫಯಾಜ್ ಸಾಬ್, ಮುಬಾರಕ ಸಾಬ್, ರಫಿಕ್ ಸಾಬ್, ರಫಿ ಉಮರ್ ಸಾಬ್, ಮುಸ್ತಾಕ್ ಸಾಬ್, ಖಾದರ್ ಸಾಬ್, ಅದ್ನಾನ್ ಸಾಬ್, ಯಾಸಿನ್ ಸಾಬ್, ಅಬ್ರಾಜ್ ಖಾನ್, ಆಯಿಷಾ ಸಾಬ್, ಶಬಾನಾ ಸಾಬ್ ವಿರುದ್ಧ ಅಜೀಜ್ ಸಾಬ್ ಪೊಲೀಸ್ ದೂರು ನೀಡಿದ್ದಾರೆ.