ಉತ್ತರ ಕನ್ನಡ ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷರಾಗಿ ಮಾಧವ ನಾಯಕ ಆಯ್ಕೆಯಾಗಿದ್ದಾರೆ. ಅಂಕೋಲಾದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಹೋರಾಟದ ದಿಸೆಯಲ್ಲಿ ಮಾಧವ ನಾಯಕ ಅವರು ಜನಶಕ್ತಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. ವೃತ್ತಿ ದಿಸೆಯಲ್ಲಿ ಕಾರವಾರ ತಾಲೂಕಾ ನೊಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘಕ್ಕೂ ಅವರು ಅಧ್ಯಕ್ಷರಾಗಿದ್ದಾರೆ. ಸಮಾಜ ಸೇವೆ ದಿಸೆಯಲ್ಲಿ ಭಾರತೀಯ ರೆಡ್ ಕ್ರಾಸ್’ನ ಪ್ರಕೃತಿ ವಿಕೋಪ ಸಮಿತಿಗೆ ಸಹ ಅಧ್ಯಕ್ಷರಾಗಿದ್ದಾರೆ. ಧಾರ್ಮಿಕವಾಗಿ ಕಾರವಾರ ಗಾಯತ್ರಿ ಸಮೂಹಕ್ಕೆ ಅವರು ಅಧ್ಯಕ್ಷರಾಗಿದ್ದಾರೆ. ಪ್ರಸ್ತುತ ಲಾರಿ ಚಾಲಕ ಹಾಗೂ ಮಾಲಕರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಹೋರಾಟ ನಡೆಸಿದ ಹಿನ್ನಲೆ ಉತ್ತರ ಕನ್ನಡ ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷರಾಗಿ ಮಾಧವ ನಾಯಕ ಅವರನ್ನು ಮರು ಆಯ್ಕೆ ಮಾಡಲಾಗಿದೆ.
ಅಂಕೋಲಾದ ಅವರ್ಸಾ ಲಕ್ಷ್ಮಿನಾರಾಯಣ ಸಭಾಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಸರ್ವ ಸದಸ್ಯರು ಹೊಸ ಪದಾಧಿಕಾರಿಗಳ ನೇಮಕದ ಕುರಿತು ಚರ್ಚಿಸಿದರು. ಈ ವೇಳೆ ಮಾಧವ ನಾಯಕ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸರ್ವರೂ ಒಪ್ಪಿಗೆ ಸೂಚಿಸಿದರು. ಸಂಘದ ಗೌರವಾಧ್ಯಕ್ಷರಾಗಿ ವಿಜಯನಗರ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೆ ಎಸ್ ಮಣಿ, ಹುಬ್ಬಳ್ಳಿ- ಧಾರವಾಡ ಜಿಲ್ಲೆಯ ಅಧ್ಯಕ್ಷ ಗಿರೀಶ್ ಮಲೆನಾಡು ಅವರನ್ನು ನೇಮಿಸಿಕೊಳ್ಳಲಾಯಿತು.
ಇದರೊಂದಿಗೆ ಉಪಾಧ್ಯಕ್ಷರಾಗಿ ತುಳಸಿದಾಸ್ ಕಾಮತ್, ಮಂಜುನಾಥ್ ನಾಯ್ಕ, ಸುಜಯ್ ಮರಾಠೆ ಯಲ್ಲಾಪುರ, ಕಾರ್ಯದರ್ಶಿಯಾಗಿ ಆನಂದ್ ನಾಯ್ಕ, ಜಂಟಿ ಕಾರ್ಯದರ್ಶಿಯಾಗಿ ಅಮಿತ್ ನಾಯ್ಕ, ಸಂಘಟನಾ ಕಾರ್ಯದರ್ಶಿಯಾಗಿ ಕಿರಣ್ ಆನಂತ ನಾಯ್ಕ, ಖಜಾಂಚಿಯಾಗಿ ಸುಮಿತ್ ಅಸ್ನೋಟಿಕರ್ ಆಯ್ಕೆಯಾದರು.
ಜಿಲ್ಲಾ ಸಮಿತಿಗೆ ತಾಲೂಕುವಾರು ಕಾರ್ಯನಿರ್ವಾಹಕ ಸದಸ್ಯರ ಆಯ್ಕೆಯೂ ನಡೆಯಿತು. ಕಾರವಾರದಿಂದ ಮಾಧವ ನಾಯಕ, ಆನಂದ್ ಎಸ್ ನಾಯ್ಕ, ಸುಮಿತ್ ಅಸ್ನೋಟಿಕರ್, ರಕ್ಷಿತ್ ಪಿ ನಾಯ್ಕ, ಅಂಕೋಲಾದಿAದ ನಿತ್ಯಾನಂದ ನಾಯ್ಕ, ಫಯಾಜ್ ಶೇಖ್, ಕಿರಣ್ ನಾಯ್ಕ, ರವಿರಾಜ್ ಶೆಟ್ಟಿ, ಸುರೇಶ್ ನಾಯ್ಕ, ವಿನೋದ್ ನಾಯ್ಕ, ಮಂಜುನಾಥ್ ನಾಯ್ಕ, ತುಳಸಿದಾಸ್ ಕಾಮತ್, ಕುಮಟಾದಿಂದ ಪ್ರಜ್ವಲ್ ನಾಯ್ಕ, ಅಭಿಷೇಕ್ ನಾಯ್ಕ, ಗಂಗು ನಾಯ್ಕ ಅವರನ್ನು ಆಯ್ಕೆ ಮಾಡಲಾಯಿತು. ಹೊನ್ನಾವರದಿಂದ ಸಿದ್ಧಾರ್ಥ ಕಾಮತ್, ಶಿವಾನಂದ ನಾಯ್ಕ, ಭಟ್ಕಳದಿಂದ ಶ್ರೀನಾಥ್ ಭವನ್, ತಿಮ್ಮಯ್ಯ ನಾಯ್ಕ, ಯಲ್ಲಾಪುರದಿಂದ ಸುಜಯ್ ಮರಾಠೆ, ಅಮಿತ್ ನಾಯ್ಕ, ಕೌಜಾ ಅಕ್ತರ್, ಮಹೇಶ್ ನಾಯ್ಕ, ಶಿರಸಿಯಿಂದ ಪ್ರವೀಣ್ ಶೆಟ್ಟಿ, ಶ್ರೀನಿವಾಸ್ ನಾಯ್ಕ, ಮುಂಡಗೋಡದಿAದ ಸಂಜೀವ ಪಿಸೆ, ರಾಜೀವ್ ವರ್ಗೀಸ್, ರಾಜಕುಮಾರ್ ಮೊಸಲ್ಗೆ ಆಯ್ಕೆಯಾದರು.
ಈ ಸಭೆಯಲ್ಲಿ ಲಾರಿ ಮಾಲಕರು ಅನುಭವಿಸುತ್ತಿರುವ ಸಮಸ್ಯೆ ಹಾಗೂ ಅದಕ್ಕೆ ಒದಗಿಸುವ ಪರಿಹಾರಗಳ ಬಗ್ಗೆ ಚರ್ಚೆ ನಡೆಯಿತು. `ಜಿಲ್ಲೆಯಲ್ಲಿ ಯಾವುದೇ ಯೋಜನೆ ಬಂದರೂ ರಾಜ್ಯದ ಹೊರಗಿನ ಲಾರಿಗಳು ಬಂದು ಕೆಲಸ ಮಾಡುತ್ತವೆ. ಸ್ಥಳೀಯ ಲಾರಿಗಳಿಗೆ ಆದ್ಯತೆ ನೀಡುತ್ತಿಲ್ಲ’ ಎನ್ನುವ ವಿಷಯದ ಕುರಿತು ಅನೇಕರು ಬೇಸರ ವ್ಯಕ್ತಪಡಿಸಿದರು. ಈ ಸಭೆಯಲ್ಲಿ ಗಣಪತಿ ನಾಯಕ ಮೂಲೆಮನೆ, ಸಾಗರ್ ಮೇಸ್ತ್ರಿ, ಸುರೇಶ್ ನಾಯ್ಕ, ಮಾರುತಿ ನಾಯ್ಕ ಇತರರು ಇದ್ದರು.