ಕಳೆದ 3 ವರ್ಷಗಳಿಂದ ಶಿರಸಿ ಹಾಗೂ ಸುತ್ತಮುತ್ತಲಿನ ಜನರಿಗೆ ಎಲೆಕ್ಟ್ರಿಕ್ ಉಪಕರಣ ಮಾರಾಟ ಹಾಗೂ ದುರಸ್ಥಿ ಸೇವೆ ಒದಗಿಸಿದ ಸಿಂಪಿಗಲ್ಲಿಯ ಶ್ರೀ ವೀರಾಂಜಿನೇಯ ಎಲೆಕ್ಟ್ರಿಕ್’ನವರು ಇದೀಗ ಹಲವು ವಿಶೇಷತೆಗಳನ್ನು ಒಳಗೊಂಡ ಬಾಸುಕಿ ಲೀಥಿಯಂ ಬ್ಯಾಟರಿಯನ್ನು ಪರಿಚಯಿಸಿದ್ದಾರೆ. ಆಕರ್ಷಕ ವಿನ್ಯಾಸ, ಸ್ಪರ್ಧಾತ್ಮಕ ಬೆಲೆ, ಅತ್ಯಂತ ಹಗುರ ಹಾಗೂ ಕಿಂಚಿತ್ತು ನಿರ್ವಹಣೆಯಿಲ್ಲದ ಲೀಥಿಯಂ ಬ್ಯಾಟರಿ ಮಾರುಕಟ್ಟೆಗೆ ಬಂದಿದೆ. ಶ್ರೀ ವೀರಾಂಜಿನೇಯ ಎಲೆಕ್ಟ್ರಿಕ್ ಮೂಲಕ ಅದು ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಪೂರೈಕೆಯಾಗುತ್ತಿದೆ.
ಐದು ಅಣೆಕಟ್ಟು ಹಾಗೂ ಕೈಗಾ ಅಣು ವಿದ್ಯುತ್ ಘಟಕದ ಮೂಲಕ ಉತ್ತರ ಕನ್ನಡ ಜಿಲ್ಲೆ ದೇಶಕ್ಕೆ ವಿದ್ಯುತ್ ಪೂರೈಕೆ ಮಾಡುತ್ತಿದೆ. ಆದರೆ, ಈ ಗುಡ್ಡಗಾಡು ಜಿಲ್ಲೆಯಲ್ಲಿ ನಿರಂತರ ವಿದ್ಯುತ್ ಪೂರೈಕೆ ಕಷ್ಟಕರ. ಮಳೆಗಾಲದಲ್ಲಿ ಪ್ರತಿ 10-15 ನಿಮಿಷಕ್ಕೆ ವಿದ್ಯುತ್ ಕಡಿತ ಸಾಮಾನ್ಯ. ಗುಡುಗು-ಸಿಡಿಲಿನಂಥ ಸನ್ನಿವೇಶದಲ್ಲಿ ಟಿವಿ, ಫ್ಯಾನ್ ಸೇರಿ ಹಲವು ವಿದ್ಯುತ್ ಉಪಕರಣಗಳು ಹಾಳಾಗುವುದು ಇಲ್ಲಿನವರಿಗೆ ಹೊಸತಲ್ಲ. ಆದರೆ, ಬಸುಕಿ ಲೀಥಿಯಂ ಯುಪಿಎಸ್ ಅಳವಡಿಸಿದರೆ ವಿದ್ಯುತ್ ಉಪಕರಣ ಹಾಳಾಗುವ ಚಿಂತೆಯಿಲ್ಲ. ವಿದ್ಯುತ್ ಕಡಿತ ಆಯಿತು ಎಂಬ ತಲೆಬಿಸಿಯಿಲ್ಲ!
ಸಾಮಾನ್ಯವಾಗಿ ಎಲ್ಲಾ UPS ಕಂಪನಿಯೂ ಬ್ಯಾಟರಿ ಹಾಗೂ ಇನ್ವರ್ಟರನ್ನು ಬೇರೆ ಬೇರೆಯಾಗಿರಿಸುತ್ತದೆ. ಅವರೆಡು ಸೇರಿ ಕನಿಷ್ಟ 80 ಕೆಜಿ ತೂಕವಿರುತ್ತದೆ. ಬೇರೆ ಬೇರೆ UPS’ಗಳಿಗೆ ಡಿಸ್ಟಿರಿಯಲ್ ವಾಟರ್ ಕಡ್ಡಾಯ. ಜೊತೆಗೆ ಆಗಾಗ UPS ಕುರಿತು ನಿಗಾವಹಿಸಬೇಕಾಗುತ್ತದೆ. ಆದರೆ, ಬಾಸುಕಿ ಲೀಥಿಯಂ UPS’ನಲ್ಲಿ ಹಾಗಲ್ಲ. ಬ್ಯಾಟರಿ ಹಾಗೂ ಯುಪಿಎಸ್ ಒಟ್ಟಿಗೆ ಇದ್ದು, ಬರೇ 22 ಕೆಜಿ ತೂಕವಿರುತ್ತದೆ. ಇದಕ್ಕೆ ಡಿಸ್ಟಿರಿಯಲ್ ವಾಟರ್ ಅಗತ್ಯವಿಲ್ಲ. ಒಮ್ಮೆ ಒಂದು ಕಡೆ ಸ್ಥಾಪಿಸಿದರೆ ವರ್ಷಗಳ ಕಾಲ ಯುಪಿಎಸ್ ಕಡೆ ಗಮನಹರಿಸಬೇಕಾದ ಅವಷ್ಯಕತೆಯೂ ಬರುವುದಿಲ್ಲ!
ಇನ್ನೂ ಬಾಸುಕಿ ಲೀಥಿಯಂ ಯುಪಿಎಸ್’ನ್ನು ಎಲ್ಲಿ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದು. ಮನೆ ಮೂಲೆಯ ಗೋಡೆಗೆ ಸುರಕ್ಷಿತವಾಗಿ ತೂಗಿ ಹಾಕಬಹುದು. ಅತಿ ಚಿಕ್ಕ UPS ಇದಾಗಿರುವ ಕಾರಣ ಅತ್ಯಂತ ಕಡಿಮೆ ಜಾಗ ಸಾಕು. ಬ್ಯಾಟರಿ ಚಾರ್ಜ ಮಾಡಿದ ನಂತರ ವಿದ್ಯುತ್ ಇಲ್ಲದ ಸ್ಥಳಗಳಿಗೂ ಒಯ್ದು ಬಳಸಬಹುದು. ವಿದ್ಯುತ್ ಇಲ್ಲದ ಸ್ಥಳಗಳಲ್ಲಿ ಸೋಲಾರ್ ಅಳವಡಿಸಿ ಚಾರ್ಜ ಮಾಡುವ ಅವಕಾಶವನ್ನು ಸಹ ಬಸುಕಿ ಯುಪಿಎಸ್ ಒದಗಿಸುತ್ತದೆ.
ಇನ್ನೂ ಸಾಮಾನ್ಯ ಯುಪಿಎಸ್ ಪೂರ್ತಿಯಾಗಿ ಚಾರ್ಜ ಆಗಲು 2 ಯುನಿಟ್ ವಿದ್ಯುತ್ ಜೊತೆ 12 ತಾಸು ಸಮಯಬೇಕು. ಆದರೆ, ಲೀಥಿಯಂ ಯುಪಿಎಸ್ ಪೂರ್ತಿ ಚಾರ್ಜ ಆಗಲು 1 ಯನಿಟ್ ವಿದ್ಯುತ್ ಜೊತೆ 6 ತಾಸಿನ ಸಮಯ ಸಾಕು.
ಬಾಸುಕಿ ಲೀಥಿಯಂ UPS’ನ ಪ್ರಯೋಜನಗಳೇನು? ವಿಡಿಯೋ ನೋಡಿ.. ಆ ನಂತರ ಮುಂದೆ ಓದಿ..
ಶ್ರೀ ವೀರಾಂಜಿನೇಯ ಎಲೆಕ್ಟ್ರಿಕ್’ನವರು ಒದಗಿಸುತ್ತಿರುವ ಬಾಸುಕಿ ಯುಪಿಎಸ್ ಕನ್ನಡಿಗರ ಸಂಸ್ಥೆ. ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಂದಹಿಡಿದು ಆಡಳಿತ ಮಂಡಳಿಯವರೆಗೆ ಎಲ್ಲರೂ ಕನ್ನಡಿಗರು. 5 ವರ್ಷಗಳ ಇನ್ವರ್ಟರ್ ವಾರಂಟಿ ಜೊತೆ 10 ವರ್ಷಗಳ ಕಾಲದ ಬ್ಯಾಟರಿ ಬಾಳಿಕೆಗೂ ಕಂಪನಿ ಭರವಸೆಯೇ ಗ್ಯಾರಂಟಿ. 1ಕೆವಿಯಿಂದ 10 ಕೆವಿವರೆಗಿನ ಯುಪಿಎಸ್’ಗಳು ಶ್ರೀ ವೀರಾಂಜಿನೇಯ ಎಲೆಕ್ಟ್ರಿಕ್’ನಲ್ಲಿ ಲಭ್ಯ.
ಲೀಥಿಯಂ ಬ್ಯಾಟರಿ UPS’ನ್ನು ಕಣ್ಣಾರೆ ನೋಡಿ, ಪರೀಕ್ಷಿಸಬೇಕೆ? ಹಾಗಾದರೆ, ಇಲ್ಲಿ ಭೇಟಿ ಕೊಡಿ: ಶ್ರೀ ವೀರಾಂಜಿನೇಯ ಎಲೆಕ್ಟ್ರಿಕ್, ಸಿಂಪಿಗಲ್ಲಿ, ಶಿರಸಿ
ಅಥವಾ ಇಲ್ಲಿ ಫೋನ್ ಮಾಡಿ: 9611708009
#Sponsored