ಕಳೆದ ಆರು ತಿಂಗಳಿನಿoದ ಪತ್ನಿ ಜೊತೆ ಮುನಿಸಿಕೊಂಡು ಮೌನವಾಗಿದ್ದ ವೆಂಕಟ್ರಮಣ ಮುಕ್ರಿ ಅಡುಗೆ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿರಸಿ ಬೈರುಂಬೆಯಲ್ಲಿ ವೆಂಕಟ್ರಮಣ ಮುಕ್ರಿ (45) ಎಲೆಕ್ಟ್ರಿಕ್ ಕೆಲಸ ಮಾಡಿಕೊಂಡಿದ್ದರು. ದುಡುಕು ಸ್ವಭಾವದ ಅವರು ಸದಾ ಸಿಟ್ಟಿನಲ್ಲಿರುತ್ತಿದ್ದರು. ಕಳೆದ ಆರು ತಿಂಗಳ ಹಿಂದೆ ಪತ್ನಿ ಜೊತೆ ಜಗಳವಾಡಿದ್ದರು. ಅದಾದ ನಂತರ ತಮ್ಮದೇ ಮನೆಯ ಅಡುಗೆ ಕೋಣೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು.
ಈ ಅವಧಿಯಲ್ಲಿ ಅವರು ಕುಟುಂಬದವರ ಜೊತೆ ಬೆರೆಯುತ್ತಿರಲಿಲ್ಲ. ಪತ್ನಿ ಮೇಲಿನ ಮುನಿಸು ಕಡಿಮೆ ಆಗಿರಲಿಲ್ಲ. ಫೆ 8ರ ಸಂಜೆಯವರೆಗೂ ಅವರು ಮನೆ ಸುತ್ತ ಓಡಾಡಿಕೊಂಡಿದ್ದರು. ಫೆ 9ರಂದು ಮನೆಯಿಂದ ಹೊರ ಬಂದಿರಲಿಲ್ಲ. ಹೀಗಾಗಿ ಕುಟುಂಬದವರು ಅಡುಗೆ ಕೋಣೆಯಲ್ಲಿ ಇಣುಕಿ ನೋಡಿದಾಗ ಅಲ್ಲಿದ್ದ ಕಟ್ಟಿಗೆ ಪಕಾಸಿಗೆ ವೆಂಕಟ್ರಮಣ ಮುಕ್ರಿ ನೇತಾಡುತ್ತಿರುವುದು ಕಾಣಿಸಿತು.
ನೇರಳೆ ಬಣ್ಣದ ಶಾಲನ್ನು ಉರುಳಿಗೆ ಹಾಕಿಕೊಂಡು ಅವರು ಅಲ್ಲಿ ಸಾವನಪ್ಪಿದ್ದರು. ಶಿರಸಿ ಟಿಎಂಎಸ್’ಲಿ ಕೆಲಸ ಮಾಡುವ ವೈಷ್ಣವಿ ಮುಕ್ರಿ ಅವರು ತಂದೆಯ ಸಾವಿನ ಬಗ್ಗೆ ಪೊಲೀಸರಿಗೆ ವರದಿ ಒಪ್ಪಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡರು.