ವೈಯಕ್ತಿಕ ಕಾರಣದಿಂದ ಹಾರ್ಪಿಕ್ ಕುಡಿದ ಗುತ್ತಿಗೆದಾರ ರವಿ ಶಿರೂಡಕರ್ 13 ದಿನದ ನರಳಾಟದ ನಂತರ ಸೋಮವಾರ ಸಾವನಪ್ಪಿದ್ದಾರೆ.
ಕಾರವಾರದ ಬೈತಖೋಲ್’ದಲ್ಲಿ ರವಿ ಶಿರೂಡ್ಕರ್ (55) ವಾಸವಾಗಿದ್ದರು. ಕಳೆದ ಅನೇಕ ವರ್ಷಗಳಿಂದ ಅವರು ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ನಗರಸಭೆ ಸೇರಿ ವಿವಿಧ ಸರ್ಕಾರಿ ಕೆಲವನ್ನು ಸಹ ಅವರು ಮಾಡಿಕೊಂಡಿದ್ದರು. ಅನೇಕ ಕಡೆ ಸಾಲವನ್ನು ಸಹ ಹೊಂದಿದ್ದರು.
ಜನವರಿ 28ರಂದು ಅವರು ಮನೆಯಲ್ಲಿದ್ದ ಹಾರ್ಪಿಕ್ ಕುಡಿದರು. ತಕ್ಷಣ ಅವರನ್ನು ಕುಟುಂಬದವರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಗೋವಾ ಮಡಗಾವಿನ ಅಪಲೋ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಅಲ್ಲಿಂದ ಮುಂದೆ ಹುಬ್ಬಳ್ಳಿಯ ಎಸ್‌ಡಿಎಂ ಆಸ್ಪತ್ರೆಗೆ ಕಳುಹಿಸಲಾಯಿತು.
ಸಾಕಷ್ಟು ಚಿಕಿತ್ಸೆ ನೀಡಿದರೂ ರವಿ ಶಿರೂಡಕರ್ ಚೇತರಿಸಿಕೊಳ್ಳಲಿಲ್ಲ. ಸೋಮವಾರ ಅವರು ಆಸ್ಪತ್ರೆಯಲ್ಲಿಯೇ ಕೊನೆಉಸಿರೆಳೆದರು. ರವಿ ಶಿರೂಡಕರ್ ಅವರು ಹಾರ್ಪಿಕ್ ಸೇವನೆಗೆ ನಿಖರ ಕಾರಣ ಗೊತ್ತಾಗಿಲ್ಲ. ಕಣ್ತಪ್ಪಿನಿಂದ ಅವರು ಹಾರ್ಪಿಕ್ ಸೇವನೆ ಮಾಡಿರುವ ಬಗ್ಗೆ ಕುಟುಂಬದವರು ಅಂದಾಜಿಸಿದ್ದಾರೆ.
ಅಗಲಿದ ಗೆಳೆಯನಿಗೆ ಸಂತಾಪ:
ರವಿ ಶಿರೂಡಕರ್ ಅವರು ಕಾರವಾರ ತಾಲೂಕಾ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿದ್ದರು. ಗುತ್ತಿಗೆದಾರರ ಸಮಸ್ಯೆ ಬಗ್ಗೆ ಸದಾ ಧ್ವನಿ ಎತ್ತುತ್ತಿದ್ದರು. ಅವರ ನಿಧನದ ಹಿನ್ನಲೆ ಕಾರವಾರ ತಾಲೂಕಾ ಗುತ್ತಿಗೆದಾರರ ಸಂಘ ಸಂತಾಪ ಸೂಚಿಸಿದೆ. ಮಂಗಳವಾರ ರವಿ ಶಿರೂಡಕರ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಮಾಹಿತಿ ನೀಡಿದ್ದಾರೆ.