ಪ್ರವಾಸದ ಉದ್ದೇಶದಿಂದ ದಾಂಡೇಲಿಗೆ ಬಂದಿದ್ದ ಇನೋವಾ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಆ ನಂತರ ಕಾರು ಪಲ್ಟಿಯಾಗಿದ್ದು, ಒಳಗಿದ್ದ 8 ಜನ ಗಾಯಗೊಂಡಿದ್ದಾರೆ.
ಶನಿವಾರ ಹುಬ್ಬಳ್ಳಿಯಿಂದ ಈ ಕಾರು ಹೊರಟಿತ್ತು. ತಾಟಗೇರಾ ಕ್ರಾಸಿನ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿತು. ಪರಿಣಾಮ ರಸ್ತೆ ಅಂಚಿನ ಮರಕ್ಕೆ ಕಾರು ಗುದ್ದಿತು. ಗುದ್ದಿದ ರಭಸಕ್ಕೆ ಕಾರು ಪಲ್ಟಿಯಾಯಿತು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ 8 ಜನರ ಪೈಕಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ.
ಅಪಘಾತದಲ್ಲಿ ಗಾಯಗೊಂಡವರನ್ನು ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಗಂಭಿರ ಗಾಯಗೊಂಡ ಹುಬ್ಬಳ್ಳಿಯ ಅನೂಪ್ ಅವರನ್ನು ಧಾರವಾಡದ ಆಸ್ಪತ್ರೆಗೆ ಕಳುಹಿಸಲಾಗಿದೆ. ಹುಬ್ಬಳ್ಳಿ ಮೂಲದ ಮಹಮ್ಮದ್ ಪುರ್ಕಾನ್, ಮಲಿಕ್ ಇರ್ಫಾನ್ ನದಾಫ್ ಮತ್ತು ಅಲಿಸಾಬ್ ಇರ್ಫಾನ್ ನದಾಫ್ ಇಲ್ಲಿ ಚಿಕಿತ್ಸೆ ಪಡೆದ ನಂತರ ಧಾರವಾಡದ ಆಸ್ಪತ್ರೆಗೆ ತೆರಳಿದ್ದಾರೆ. ಕೌಶಿಕ್ ಮತ್ತು ನಂದನ್ ಹಾಗೂ ಇನ್ನಿತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತವಾದ ಕಾರು ಜಖಂ ಆಗಿದೆ.