ಯಲ್ಲಾಪುರ ತಾಲೂಕಿನ ಮಾವಳ್ಳಿಯಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಅಚ್ಚುಕಟ್ಟಾದ ವ್ಯವಸ್ಥೆಯ ಹಿಂದೆ ಇಲ್ಲಿನ ನೂರಾರು ಸ್ವಯಂ ಸೇವಕರ ಶ್ರಮ ಅಡಗಿದೆ.
ಐದು ವರ್ಷಗಳಿಗೆ ಒಮ್ಮೆ ಮಾವಳ್ಳಿಯಲ್ಲಿ ಜಾತ್ರೆ ನಡೆಯುತ್ತದೆ. ಫೆ 19ರಿಂದ ಶುರುವಾದ ಮಾವಳ್ಳಿಯ ಜಾತ್ರೆ ಫೆ 27ರವರೆಗೆ ನಡೆಯಲಿದೆ. ನಂಬಿದ ಭಕ್ತರನ್ನು ಇಲ್ಲಿನ ದೇವಿಯರು ಸದಾ ಕಾಪಾಡುತ್ತಿದ್ದಾರೆ. ಮೊದಲು ಈ ಭಾಗದ ಜನ ಆರ್ಥಿಕವಾಗಿ ಹಿಂದುಳಿದವರಾಗಿದ್ದು, ದೇವಿ ಆರಾಧನೆ ನಂತರ ಕ್ಷೇತ್ರ ಅಭಿವೃದ್ಧಿಯಾಗಿದೆ ಎಂಬುದು ಭಕ್ತರ ಅನುಭವ.
ಮಾವಳ್ಳಿಯಲ್ಲಿ ನೆಲೆಸಿರುವ ಮಹಾಕಾಳಿ ಹಾಗೂ ಮಹಾದುರ್ಗಿ ದೇವಿಯರಿಗೆ ರಾಜ್ಯದ ನಾನಾ ಭಾಗಗಳಲ್ಲಿ ಭಕ್ತರಿದ್ದಾರೆ. ಬೇರೆ ಬೇರೆ ರಾಜ್ಯಗಳಿಂದಲೂ ನಿತ್ಯ ದರ್ಶನಕ್ಕೆ ಭಕ್ತರು ಬರುತ್ತಿದ್ದಾರೆ. ಹೀಗೆ ಬರುವ ಭಕ್ತರಿಗೆ ಪ್ರತಿ ದಿನ ಅನ್ನ ದಾಸೋಹ ನಡೆಯುತ್ತಿದೆ. ನೂರಾರು ಸ್ವಯಂ ಸೇವಕರು ಈ ವ್ಯವಸ್ಥೆಗಾಗಿ ಶ್ರಮಿಸುತ್ತಿದ್ದಾರೆ. ಅವರಿಗೆ ದೇಗುಲ ಆಡಳಿತ ಮಂಡಳಿ ಬೆನ್ನೆಲುಬಾಗಿ ನಿಂತಿದೆ.
ಆಕರ್ಷಕ ಗದ್ದುಗೆಯಲ್ಲಿ ಆಸೀನರಾಗಿರುವ ದೇವತೆಯರು ಭಕ್ತರ ಸೇವೆ ಸ್ವೀಕರಿಸುತ್ತಿದ್ದು, ಜಾತ್ರೆಯ ಅಂಗವಾಗಿ ವಿವಿಧ ಮನರಂಜನೆ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ. ಧರ್ಮ ಜಾಗೃತಿಯ ಉಪನ್ಯಾಸಗಳು ನಡೆಯುತ್ತಿದೆ. ಕೀರ್ತನೆ, ಸಂಗೀತ, ನಾಟ್ಯ ಹಾಗೂ ನಾಟಕಗಳನ್ನು ಭಕ್ತರು ಸವಿಯುತ್ತಿದ್ದಾರೆ. ಶಾಲಾ ಮಕ್ಕಳ ಕಾರ್ಯಕ್ರಮಗಳು ಗಮನಸೆಳೆಯುತ್ತಿವೆ. ಕಳೆದ ಮೂರು ತಿಂಗಳಿನಿAದ ಊರಿನವರು ಸಿದ್ಧತೆ ನಡೆಸಿದ ಪರಿಣಾಮ ಜಾತ್ರಾ ಮಹೋತ್ಸವ ಯಶಸ್ವಿಯಾಗುತ್ತಿದೆ.
ಇನ್ನೂ, ಜಾತ್ರಾಯ ಅಂಗವಾಗಿ ಆಕರ್ಷಕ ಆಟಿಕೆ ಸಾಮಗ್ರಿಗಳು ಬಂದಿವೆ. ವಾಣಿಜ್ಯ ಮಳಿಗೆಗಳು ಸಾಕಷ್ಟಿವೆ. ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ಆಡಳಿತ ಮಂಡಳಿ ಮುತುವರ್ಜಿವಹಿಸಿದೆ.