ಮುಚ್ಚಿಟ್ಟ ಸತ್ಯವನ್ನು ಜನರ ಎದುರು ತೆರೆದಿಟ್ಟು ರಾಷ್ಟ್ರೀಯತೆಯ ಕುರಿತು ಜನ ಜಾಗೃತಿ ಮೂಡಿಸುವ `ಸತ್ಯವನ್ನೇ ಹೇಳುತ್ತೇನೆ’ ನಾಟಕ ಮಾರ್ಚ 2ರಂದು ಯಲ್ಲಾಪುರ ಮಂಚಿಕೇರಿಯಲ್ಲಿ ಪ್ರದರ್ಶನವಾಗಲಿದೆ. ಮಂಚಿಕೇರಿಯ ರಂಗ ಮಂದಿರದಲ್ಲಿ ಅಂದು ಸಂಜೆ 6.30ಕ್ಕೆ ಈ ನಾಟಕ ಪ್ರದರ್ಶನ ನಡೆಯಲಿದೆ.
ಅನಂತಮೂರ್ತಿ ಹೆಗಡೆ ಚ್ಯಾರಿಟೇಬಲ್ ಟ್ರಸ್ಟ ಈ ಅಪರೂಪದ ನಾಟಕವನ್ನು ಸಂಯೋಜಿಸಿದೆ. ಆತ್ಮಸಾಕ್ಷಿಯ ನ್ಯಾಯಾಲಯದಲ್ಲಿ ನ್ಯಾಯಾಧೀಶನಾಗಿರುವ ರೈತನ ಮುಂದೆ ಮಾಹಾತ್ಮ ಗಾಂಧೀಜಿ, ಬಿ ಆರ್ ಅಂಬೇಡ್ಕರ್, ಜವಾರಹಲಾಲ್ ನೆಹರು, ವೀರ ಸಾವರ್ಕರ್, ಸುಭಾಶ್ಚಂದ್ರ ಬೋಸ್, ವಲ್ಲಭಾಯಿ ಪಟೇಲ್ ಮೊದಲಾದವರು ಬಂದು ಮಾತನಾಡುತ್ತಾರೆ. ಕಳೆದ 60-70 ವರ್ಷಗಳ ಹಿಂದೆ ನಡೆದ ವಿದ್ಯಮಾನಗಳ ಬಗ್ಗೆ ಅವರು ಜನರ ಎದುರು ಸತ್ಯ ಹೇಳುತ್ತಾರೆ.
ಕನ್ನಡ ರಂಗಭೂಮಿ ಪ್ರಯೋಗದಲ್ಲಿ ಯಾರೂ ಮಾಡದ ವಿಶೇಷ ಪ್ರಯತ್ನ ಈ ನಾಟಕದಲ್ಲಿದೆ. ಈ ನಾಟಕದಲ್ಲಿ ನ್ಯಾಯವಾದಿಯಾಗಿ ರಂಗಭೂಮಿ ಕಲಾವಿಧೆ ಅನಿತಾ ಕಾರ್ಯಪ್ಪ ಅವರು ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಅಡ್ಡಂಡ ಕಾರ್ಯಪ್ಪ ಅವರು ನಾಟಕದ ರಚನಾಕಾರರಾಗಿದ್ದಾರೆ. ವರ್ತಮಾನದ ವಿರೂಪಕ್ಕೆ ಹಿಡಿದ ಕನ್ನಡಿಯಾಗಿರುವ ಈ ನಾಟಕಕ್ಕೆ ಪ್ರವೇಶ ಶುಲ್ಕವಿಲ್ಲ.
ಅನೇಕ ಕ್ಷೇತ್ರದ ಗಣ್ಯರು ಈ ನಾಟಕ ವೀಕ್ಷಣೆಗೆ ಬರಲಿದ್ದಾರೆ. ಜನ ಜಾಗೃತಿಯ ಉದ್ದೇಶದಿಂದ ಈ ನಾಟಕವನ್ನು ಆಯೋಜಿಸಿರುವುದಾಗಿ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.