ಕುಮಟಾದ ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯೂ ಮಾರ್ಚ 5ರಿಂದ ಮಹಿಳೆಯರಿಗೆ ವಸ್ತ್ರ ವಿನ್ಯಾಸ ತರಬೇತಿ ನಡೆಸಲು ನಿರ್ಧರಿಸಿದೆ. 30 ದಿನಗಳ ಕಾಲ ಈ ತರಬೇತಿ ನಡೆಯಲಿದೆ.
ಗ್ರಾಮೀಣ ಪ್ರದೇಶದ ಬಿಪಿಎಲ್ ಅಭ್ಯರ್ಥಿಗಳಿಗೆ ಇಲ್ಲಿ ಮೊದಲ ಆದ್ಯತೆ. ತರಬೇತಿಯು ಊಟ ಮತ್ತು ವಸತಿಯನ್ನು ಒಳಗೊಂಡಿದೆ. ಸ್ವ ಉದ್ಯೋಗದಲ್ಲಿ ಆಸಕ್ತಿಯಿರುವ 18ರಿಂದ 45 ವರ್ಷದೊಳಗಿನ ನಿರುದ್ಯೋಗಿ ಮಹಿಳೆಯರು ತರಬೇತಿಯಲ್ಲಿ ಭಾಗವಹಿಸಲು ಅರ್ಹರು.
ಅಭ್ಯರ್ಥಿಗಳಿಗೆ ಕನ್ನಡ ಓದು ಹಾಗೂ ಬರಹ ಕಡ್ಡಾಯ. ತರಬೇತಿಗೆ ಅನುಗುಣವಾಗಿ ಕನಿಷ್ಠ ಜ್ಞಾನವಿದ್ದರೆ ಉತ್ತಮ. 4 ಪಾಸ್‌ಪೋರ್ಟ ಸೈಜಿನ ಫೋಟೋ ಜೊತೆ ರೇಶನ್ ಕಾರ್ಡ, ಪಾನ್ ಕಾರ್ಡ, ಆಧಾರ್ ಕಾರ್ಡ ಹಾಗೂ ಬ್ಯಾಂಕ್ ಪಾಸ್‌ಬುಕ್ ಜರಾಕ್ಸ ಜೊತೆ ಬರುವುದು ಅನಿವಾರ್ಯ.
ಕುಮಟಾದ ಹೆಗಡೆ ರಸ್ತೆಯ ಕೆನರಾ ಬ್ಯಾಂಕ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಡೆಯುವ ಈ ತರಬೇತಿ ಸಂಪೂರ್ಣ ಉಚಿತ. ಮಾಹಿತಿಗೆ ಇಲ್ಲಿ ಫೋನ್ ಮಾಡಿ: 9449860007, 9538281989 ಅಥವಾ 9916783825