ಕುಂಭಮೇಳಕ್ಕೆ ತೆರಳಿ ಕುಂದಾಪುರಕ್ಕೆ ಮರಳುತ್ತಿದ್ದ ಕಾರು ಹೊನ್ನಾವರದಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಹೇಶ ಗೌಡ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಹೊನ್ನಾವರದ ಹಳದಿಪುರದ ಮಾದಿಕೊಟ್ಟಿಗೆ ಬಳಿ ಮಹೇಶ ಗೌಡ ವಾಸವಾಗಿದ್ದರು. ಗೌಂಡಿ ಕೆಲಸ ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದರು. ಫೆ 23ರ ರಾತ್ರಿ 10.30ಕ್ಕೆ ಅವರು ಅಗ್ರಹಾರ ಕಡೆಯಿಂದ ಮಣ್ಣಗದ್ದೆ ಕಡೆ ನಡೆದು ಹೋಗುತ್ತಿದ್ದರು. ಈ ವೇಳೆ ಕುಂದಾಪುರದ ಕಾರ್ಪರೆಂಟರ್ ಸುಕುಮಾರ ಆಚಾರ್ಯ ಸಹ ಅದೇ ಮಾರ್ಗವಾಗಿ ತಮ್ಮ ಕಾರು ಓಡಿಸಿಕೊಂಡು ಬಂದರು.
ಸುಕುಮಾರ ಆಚಾರ್ಯ ಕುಂಭಮೇಳಕ್ಕೆ ತೆರಳಿದ್ದರು. ತಮ್ಮ ಶಿಪ್ಟ್ ಕಾರಿನಲ್ಲಿ ಅವರು ಅಲ್ಲಿ ತೆರಳಿದ್ದು, ಹೊನ್ನಾವರ ಮಾರ್ಗವಾಗಿ ಕುಂದಾಪುರಕ್ಕೆ ಹೊರಟಿದ್ದರು. ರಾತ್ರಿ ವೇಳೆ ನಿದ್ದೆಗಣ್ಣಿನಲ್ಲಿ ಕಾರು ಓಡಿಸಿದ ಪರಿಣಾಮ ರಸ್ತೆ ಬದಿ ನಡೆದು ಹೋಗುತ್ತಿದ್ದ ಮಹೇಶ ಗೌಡ ಅವರಿಗೆ ಗುದ್ದಿದರು. ಕಾರಿನ ವೇಗ ಹೆಚ್ಚಿದ್ದರಿಂದ ಮಹೇಶ ಗೌಡ ಅನತಿ ದೂರದಲ್ಲಿ ಹಾರಿ ಬಿದ್ದು ಕುತ್ತಿಗೆ ಜೊತೆ ಕೈ ಕಾಲು ಮುರಿದುಕೊಂಡರು. ಕ್ಷಣಮಾತ್ರದಲ್ಲಿಯೇ ಮಹೇಶ ಗೌಡ ಸಾವನಪ್ಪಿದರು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಹೇಶ ಗೌಡ ಅವರ ಸಹೋದರ ರಾಮಾ ಗೌಡ ಅವರು ನೀಡಿದ ದೂರಿನ ಮೇರೆಗೆ ಕಾರು ಚಾಲಕ ಸುಕುಮಾರ ಆಚಾರ್ಯ ವಿರುದ್ಧ ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.
ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಅಪಘಾತದ ದೃಶ್ಯಾವಳಿಗಳನ್ನು ಇಲ್ಲಿ ನೋಡಿ..