ಮೂರುವರೆ ವರ್ಷದ ಮಗುವಿನ ಜೊತೆ ತಾಯಿ ಕಾಣೆಯಾಗಿದ್ದು, ಪೊಲೀಸರು ತಾಯಿ-ಮಗುವಿನ ಹುಡುಕಾಟ ನಡೆಸಿದ್ದಾರೆ. ಇದಕ್ಕಾಗಿ ಗೋಕರ್ಣ ಪೊಲೀಸರು ಸಾರ್ವಜನಿಕರ ಸಹಾಯ ಯಾಚಿಸಿದ್ದಾರೆ.
ಕುಮಟಾ ತಾಲೂಕಿನ ಗೋಕರ್ಣದ ಬಂಗ್ಲೆಗುಡ್ಡೆಯಲ್ಲಿ ವಾಸವಾಗಿದ್ದ 23 ವರ್ಷದ ಡಿಂಪಲ್ ಕುಮಾವನ್ ಗೋಸ್ವಾಮಿ ಫೆ 22ರಂದು ಕಾಣೆಯಾಗಿದ್ದಾರೆ. ಸಂಜೆ 5 ಗಂಟೆಯವರೆಗೂ ತಮ್ಮ ಮಗು ನಿಧಿ ಜೊತೆ ಇದ್ದ ಅವರು ಏಕಾಏಕಿ ಕಣ್ಮರೆಯಾಗಿದ್ದಾರೆ. ಪುಠಾಣಿ ನಿಧಿ ಸಹ ಎಲ್ಲಿಯೂ ಕಾಣುತ್ತಿಲ್ಲ.
ಡಿಂಪಲ್ ಕುಮಾವನ್ ಗೋಸ್ವಾಮಿ ಕನ್ನಡ ಹಾಗೂ ಮಾರವಾಡಿ ಭಾಷೆ ಮಾತನಾಡುತ್ತಾರೆ. 5.3 ಅಡಿ ಎತ್ತರವಿರುವ ಅವರ ಕಣ್ಣ ರಪ್ಪೆ ಮೇಲೆ ಒಂದು ಮಚ್ಚೆಯಿದೆ. ಪುಠಾಣಿ ನಿಧಿ ಕಾಣೆಯಾಗುವ ಮುನ್ನ ಹಸಿರು ಬಣ್ಣದ ಪ್ರಾಕ್ ಧರಿಸಿದ್ದು, ತಾಯಿ ಮಗುವನ್ನು ಕಂಡರೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಪೊಲೀಸ್ ಸಹಾಯವಾಣಿ ಸಂಖ್ಯೆ: 9480805200