ಹಳೆ ದಾಂಡೇಲಿಯ ಕೆಎಸ್‌ಆರ್‌ಟಿಸಿ ಚಾಲಕ ಆರ್ ಬಿ ಗಿಡಜಾಡರ್ ಫಿನೈಲ್ ಸೇವಿಸಿದ್ದಾರೆ. ಅಸ್ವಸ್ಥಗೊಂಡ ಅವರನ್ನು ಸಹದ್ಯೋಗಿಗಳು ತುರ್ತಾಗಿ ಆಸ್ಪತ್ರೆಗೆ ದಾಖಲಿಸಿದರು.
ಆರ್ ಬಿ ಗಿಡಜಾಡರ್ ಅವರು ದಾಂಡೇಲಿ ಸಿಟಿ ಬಸ್ಸಿನ ಚಾಲಕರಾಗಿದ್ದರು. ಸೋಮವಾರ ಅವರು ಸಾಕಷ್ಟು ಮಂಕಾಗಿದ್ದರು. ಈ ದಿನ ಸಹದ್ಯೋಗಿಗಳ ಜೊತೆ ಸರಿಯಾಗಿ ಮಾತನಾಡಿರಲಿಲ್ಲ. ನಿಗಮದ ಡಿಪೋಗೆ ಆಗಮಿಸಿದ ನಂತರ ಅಲ್ಲಿಯೇ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದರು.
ಫಿನೈಲ್ ಸೇವಿಸಿ ಒದ್ದಾಡುತ್ತಿದ್ದ ಅವರನ್ನು ನೋಡಿದ ಸಾರಿಗೆ ಸಿಬ್ಬಂದಿ ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ವಿಷಯ ಅರಿತ ಘಟಕ ವ್ಯವಸ್ಥಾಪಕ ಎಲ್ ಎಚ್ ರಾಥೋಡ್ ಸಹ ಆತಂಕಕ್ಕೆ ಒಳಗಾದರು. ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ಪರಿಶೀಲಿಸಿದರು.
ಆರ್ ಬಿ ಗಿಡಜಾಡರ್ ಅವರ ಆತ್ಮಹತ್ಯೆ ಪ್ರಯತ್ನಕ್ಕೆ ಇನ್ನೂ ಕಾರಣ ಗೊತ್ತಾಗಿಲ್ಲ.