ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಶಿವರಾತ್ರಿ ಹಿನ್ನಲೆ ಗೋಕರ್ಣದಲ್ಲಿ ಎರಡು ದಿನಗಳ ಕಾಲ ಸರಾಯಿ ಮಾರಾಟ ನಿಷೇಧಿಸಲಾಗಿದೆ.
ಮಹಾಶಿವರಾತ್ರಿ ಉತ್ಸವ ಮತ್ತು ಮಹಾರಥೋತ್ಸವದ ಅಂಗವಾಗಿ ಫೆ.26 ಮತ್ತು ಫೆ. 28 ರಂದು ನಡೆಯಲಿದೆ. ಈ ಹಿನ್ನಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆವಹಿಸಲಾಗಿದೆ. ಹೀಗಾಗಿ ಫೆ 26ರಂದು ಬೆಳಗ್ಗೆ 6 ಗಂಟೆಯಿAದ ರಾತ್ರಿ 11 ಗಂಟೆಯವರೆಗೆ ಹಾಗೂ ಫೆ 28ರಂದು ಬೆಳಗ್ಗೆ 6 ರಾತ್ರಿ 11 ಗಂಟೆಯವರೆಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ
ಇದರೊಂದಿಗೆ ಆ ಭಾಗದಲ್ಲಿನ ವೈನ್ ಶಾಪ್ ಸಹ ಬಂದ್ ಮಾಡುವಂತೆ ಅವರು ಸೂಚಿಸಿದ್ದಾರೆ. ಈ ಅವಧಿಯಲ್ಲಿ ಮದ್ಯ ಸಾಗಾಟವನ್ನು ಸಹ ನಿಷೇಧಿಸಲಾಗಿದೆ.