ಎರಡು ಬೈಕುಗಳ ನಡುವೆ ನಡೆದ ಅಪಘಾತದಲ್ಲಿ ಮುಂಡಗೋಡಿನ ಅಟ್ಟಣಗಿಯ ಸುರೇಶ ವಡ್ಡರ್ (38) ಸಾವನಪ್ಪಿದ್ದಾರೆ.
ಫೆ 21ರಂದು ಮುಂಡಗೋಡ ರಾಮಾಪುರದ ಮಂಜುನಾಥ ಗೆಜ್ಜಲ್ಲಿ ಎಂಬಾತರು ಮಂಜುನಾಥ ದಾಸನಕೊಪ್ಪ ಎಂಬಾತರ ಜೊತೆ ಬೈಕಿನಲ್ಲಿ ಸಂಚರಿಸುತ್ತಿದ್ದರು. ರಾತ್ರಿ 9 ಗಂಟೆಯ ವೇಳೆಗೆ ರಾಮಾಪುರದ ಹನುಮನಕಟ್ಟಿ ಬಳಿ ತಿರುವಿನಲ್ಲಿ ಆ ಬೈಕು ಅಪಘಾತವಾಯಿತು.
ಸುರೇಶ ವಡ್ಡರ್ ಅವರು ಚಲಿಸುತ್ತಿದ್ದ ಬೈಕಿಗೆ ಮಂಜುನಾಥ ಗೆಜ್ಜಲ್ಲಿ ತಮ್ಮ ಬೈಕು ಗುದ್ದಿದರು. ಪರಿಣಾಮ ನೆಲಕ್ಕೆ ಬಿದ್ದ ಸುರೇಶ ವಡ್ಡರ್ ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಅವರನ್ನು ಹುಬ್ಬಳ್ಳಿಯ ವಿದ್ಯಾನಗರ ಶುಶ್ರತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಫೆ 24ರಂದು ಅವರು ಸಾವನಪ್ಪಿದರು.
ಈ ಬಗ್ಗೆ ಅಟ್ಟಣಗಿಯ ಅನೀಲ ವಡ್ಡರ್ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.