ಶಿವರಾತ್ರಿ ಹಿನ್ನಲೆ ಸಾವಿರಾರು ಭಕ್ತರು ಶಿವ ಕ್ಷೇತ್ರಗಳಿಗೆ ಭಕ್ತಿಯಿಂದ ತೆರಳುತ್ತಿದ್ದಾರೆ. ಹೀಗೆ ಭಕ್ತಿ ಪ್ರವಾಸಕ್ಕೆ ಅಡ್ಡಿಪಡಿಸುತ್ತಿದ್ದ ಪುಂಡ-ಪೋಕರಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ!
ಮಂಗಳವಾರ ರಾತ್ರಿ 7 ಬೈಕ್ ಸವಾರರು ಅಡ್ಡಾದಿಟ್ಟಿ ಬೈಕ್ ಚಲಾಯಿಸುತ್ತಿದ್ದರು. ದುಬಾರಿ ಬೆಲೆಯ ಬೈಕ್ ಹೊಂದಿದ್ದ ಅವರು ಸಂಚಾರಿ ನಿಯಮ ಪಾಲಿಸುತ್ತಿರಲಿಲ್ಲ. ಜೊತೆಗೆ ಬೈಕಿನಲ್ಲಿ ಸಂಚರಿಸುವಾಗಲೇ ಅಸಭ್ಯವಾಗಿ ವರ್ತಿಸುತ್ತಿದ್ದರು. ಇದರಿಂದ ಶಿವ ದೇವಾಲಯಕ್ಕೆ ತೆರಳುವ ಭಕ್ತರು ಮುಜುಗರ ಅನುಭವಿಸಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ರವಾನೆಯಾಗಿದ್ದು, ಹಳಿಯಾಳ ಪೊಲೀಸರು ಬೈಕ್ ಸವಾರರಿಗೆ ಬುದ್ದಿ ಕಲಿಸಿದರು.
ಹಳಿಯಾಳದಿಂದ ಜೊಯಿಡಾದ ಕವಳ ಜಾತ್ರೆಗೆ ತೆರಳುತ್ತಿದ್ದವರಿಗೆ ಉಪಟಳ ನೀಡುತ್ತಿದ್ದ ಬೈಕ್ ಸವಾರರನ್ನು ಹಳಿಯಾಳ ಪೊಲೀಸರು ತಡರಾತ್ರಿ ಅಡ್ಡಗಟ್ಟಿದರು. ಅವರು ಸಿಕ್ಕಿಬಿದ್ದ ಸ್ಥಳದಿಂದ ಪೊಲೀಸ್ ಠಾಣೆಯವರೆಗೂ ಬೈಕ್ ತಳ್ಳಿಕೊಂಡು ಬರುವಂತೆ ಸೂಚಿಸಿದರು. ಅದಾದ ನಂತರ ಆ ಎಲ್ಲರ ಹೆಸರು-ವಿಳಾಸ ಪಡೆದು ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದರು.