ಕಾರವಾರದ ಕೋಡಿಭಾಗದ ತಾಮ್ಸೆವಾಡ ಬಳಿ ರಸ್ತೆ ಮೇಲೆ ನಡೆದು ಹೋಗುತ್ತಿದ್ದ ಕಟ್ಟಡ ಕಾಮಿಕ ಹರೀಶ ಧಾರವಾಡಕರ ತಲೆ ತಿರುಗಿ ಬಿದ್ದು ಸಾವನಪ್ಪಿದ್ದಾರೆ.
ಹರೀಶ ಧಾರವಾಡಕರ ಹಳಿಯಾಳ ತಾಲೂಕಿನ ಕಾಮದೊಳ್ಳಿಯವರಾಗಿದ್ದರು. ಕಟ್ಟಡ ಕೆಲಸ ಮಾಡಿಕೊಂಡಿದ್ದ ಅವರು ಕಾರವಾರದಲ್ಲಿ ವಾಸವಾಗಿದ್ದರು. ಫೆ 24ರಂದು ಅವರು ಹಳಿಯಾಳಕ್ಕೆ ತೆರಳಿದ್ದು, ಸಂಜೆ ಕಾರವಾರಕ್ಕೆ ಮರಳಿದ್ದರು.
ತಾಮ್ಸೆವಾಡದಲ್ಲಿರುವ ಮನೆಗೆ ನಡೆದು ಹೋಗುವಾಗ ಅವರು ಕುಸಿದು ಬಿದ್ದರು. ತಲೆ ತಿರುಗಿದ ಕಾರಣ ಕಾತ್ಯಾಯನಿ ದೇವಸ್ಥಾನ ಹತ್ತಿರ ಅಸ್ವಸ್ಥರಾದರು. ಅಲ್ಲಿಯೇ ನೆಲಕ್ಕೆ ಬಿದ್ದು ಸಾವನಪ್ಪಿದರು.
ಈ ಎಲ್ಲಾ ವಿಷಯದ ಬಗ್ಗೆ ಅವರ ಪತ್ನಿ ಶ್ರೀದೇವಿ ಧಾರವಾಡಕರ್ ಅವರು ಕಾರವಾರ ಶಹರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.