ಕಳೆದ 14 ವರ್ಷಗಳಿಂದ ಕುಮಟಾದ ಕಡ್ಲೆ ಕಡಲತೀರದಲ್ಲಿ ಶಿವರಾತ್ರಿ ದಿನ ಶಿವನ ಮೂರ್ತಿ ರಚಿಸಲಾಗುತ್ತಿದೆ. ಮರಳಿನಲ್ಲಿ ಮೂಡಿ ಬರುವ ಈ ಮೂರ್ತಿ ವೀಕ್ಷಣೆಗೆ ಸಾವಿರಾರು ಜನ ಬರುತ್ತಿದ್ದಾರೆ.
ಕಡ್ಲೆ ಕಡಲ ತೀರದಲ್ಲಿ ಶಿವರಾತ್ರಿ ಉತ್ಸವ ಸಮಿತಿಯವರು ಈ ವರ್ಷವೂ ಬೃಹದಾಕಾರದಲ್ಲಿ ಶಿವರ ವಿಗ್ರಹ ನಿರ್ಮಿಸಿದ್ದಾರೆ. ಉಸುಕಿನ ವಿಗ್ರಹಕ್ಕೆ ಬಣ್ಣಗಳನ್ನು ಲೇಪಿಸಿದ್ದಾರೆ. ಕಲಾವಿದರ ಕೈ ಚಳಕಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವರ್ಷ ಉಸುಕಿನಲ್ಲಿ ನಿರ್ಮಾಣವಾದ ಶಿವನ ವಿಗ್ರಹವು 30 ಅಡಿ ಉದ್ದ ಹಾಗೂ 20 ಅಡಿ ಅಗಲವಿದೆ.
ಕಲಾಕಾರ ಪುರುಶೋತ್ತಮ ನಾಯ್ಕ ವಿಗ್ರಹ ರಚನೆಯ ಜವಾಬ್ದಾರಿವಹಿಸಿಕೊಂಡಿದ್ದು, ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕಲಾಕಾರರಾದ ವೆಂಕಟ್ರಮಣ ಆಚಾರಿ, ಪುರಂದರ ಆಚಾರಿ, ಅರುಣ ಆಚಾರಿ ಅವರು ಊರ ನಾಗರಿಕರ ಸಹಕಾರದಲ್ಲಿ ಈ ಮೂರ್ತಿ ರಚಿಸಿದ್ದಾರೆ. ಫೆ 27ರ ಸಂಜೆಯವರೆಗೂ ಈ ವಿಗ್ರಹ ಹೀಗೆ ಇರಲಿದೆ.



