6
  • Latest

ಒಡಹುಟ್ಟಿದವನನ್ನು ಕೊಂದವರಿಗೆ ಜೀವನಪೂರ್ತಿ ಜೈಲು!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಒಡಹುಟ್ಟಿದವನನ್ನು ಕೊಂದವರಿಗೆ ಜೀವನಪೂರ್ತಿ ಜೈಲು!

AchyutKumar by AchyutKumar
in ಸ್ಥಳೀಯ

ಆಸ್ತಿ ಕಲಹದಲ್ಲಿ ಸಹೋದರನನ್ನು ಕೊಂದ ಮೂವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಹೊನ್ನಾವರದ ವಿನಾಯಕ ಹೊನ್ನಪ್ಪ ನಾಯ್ಕ, ಚಿದಂಬರ ಹೊನ್ನಪ್ಪ ನಾಯ್ಕ ಹಾಗೂ ಮಂಜುನಾಥ ನಾಯ್ಕ ಅವರಿಗೆ ಜೈಲು ಶಿಕ್ಷೆ ಖಚಿತವಾಗಿದೆ.

ವಿನಾಯಕ ನಾಯ್ಕ, ಹಾಗೂ ಚಿದಂಬರ ನಾಯ್ಕ ಅವರು ಜಮೀನಿನ ಪಾಲಿನ ಹಂಚಿಕೆಯ ವಿಷಯದಲ್ಲಿ ಸಹೋದರ ಹನುಮಂತ ನಾಯ್ಕ ಜೊತೆ ವೈಮನಸ್ಸು ಹೊಂದಿದ್ದರು. ಇದೇ ಕಾರಣದಿಂದ ಹನುಮಂತ ನಾಯ್ಕ ತೊಟ್ಟಿಲುಗುಂಡಿಯ ತಂದೆಯ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು. 2022ರ ನ 5ರಂದು ಸಂಜೆ ಈ ಕೆಲಸಕ್ಕೆ ಬಂದಿದ್ದ ಮಂಜುನಾಥ ನಾಯ್ಕ ಸೇರಿ ಅಡಿಕೆ ತುಂಬಿದ ಚೀಲಗಳನ್ನು ವಾಹನದಲ್ಲಿ ತೆಗೆದುಕೊಂಡು ಮಾರಾಟ ಮಾಡಲು ಹೋಗುತ್ತಿದ್ದರು. ಇದನ್ನು ಹನುಮಂತ ನಾಯ್ಕ ತಡೆದಿದ್ದರು.

ಆಗ, ಆ ಮೂವರು ಹನುಮಂತ ನಾಯ್ಕರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಕೈ ರಟ್ಟೆಗಳನ್ನು ಹಿಡಿದು ಎಳೆದಾಡಿ ರಾಡುಗಳಿಂದ ತಲೆಯ ಮೇಲೆ ಹೊಡೆದಿದ್ದರು. ಹನುಮಂತ ನಾಯ್ಕರ ಮಾವ ಮಾರುತಿ ನಾಯ್ಕ ಅವರ ಮೇಲೆಯೂ ದಾಳಿ ನಡೆಸಿದ್ದರು. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಸಿಪಿಐ ಶ್ರೀಧರ ಎಸ್ ಆರ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ನ್ಯಾಯಾಧೀಶ ಡಿ ಎಸ್ ವಿಜಯಕುಮಾರ್ ಅವರು ಮೂವರಿಗೂ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಿದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು. ಹೊನ್ನಾವರ ಪೊಲೀಸ ಠಾಣೆಯ ಎಎಎಸ್‌ಐ ಜ್ಞಾನೇಶ್ವರ ಹರಿಕಂತ್ರ, ಡಿಸಿಆರ್‌ಬಿ ವಿಭಾದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಮಿತಾ ಪಾವಸ್ಥರ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ShareSendTweetShare
Previous Post

ಅಪೂರ್ಣ ಕಾಮಗಾರಿ ತಂದ ಸಂಕಷ್ಟ: ಅಧಿಕಾರಿಯ ಅಸಡ್ಡೆಗೆ ರೈತರ ಫಸಲು ನಾಶ!

Next Post

ರಾತ್ರಿಯಿಡೀ ಈಜಿ ದಡ ಸೇರಿದ ಬಡ ಮೀನುಗಾರ!

Next Post
The poor fisherman who swam ashore all night!

ರಾತ್ರಿಯಿಡೀ ಈಜಿ ದಡ ಸೇರಿದ ಬಡ ಮೀನುಗಾರ!

Sahi allegation of adultery Woman single protest against the officer!

ಸಹಿ ಪೊರ್ಜರಿ ಆರೋಪ: ಅಧಿಕಾರಿ ವಿರುದ್ಧ ಮಹಿಳೆ ಒಂಟಿ ಪ್ರತಿಭಟನೆ!

So far one calculation.. Now another calculation: The government rule has misled the fighter!

ಈವರೆಗೆ ಒಂದು ಲೆಕ್ಕ.. ಇನ್ಮುಂದೆ ಇನ್ನೊಂದು ಲೆಕ್ಕ: ಹೋರಾಟಗಾರನ ದಿಕ್ಕು ತಪ್ಪಿಸಿತು ಸರ್ಕಾರದ ನಿಯಮ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.