`ಮುಖ್ಯಮoತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅಲ್ಪಸಂಖ್ಯಾತರ ತುಷ್ಠೀಕರಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಇದನ್ನು ಸ್ವಾಗತಿಸಿರುವುದು ಕಾರ್ಯಕರ್ತರಿಗೆ ಮಾಡಿದ ಅಪಮಾನ’ ಎಂದು ಯಲ್ಲಾಪುರ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಹೇಳಿದ್ದಾರೆ.
`ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ಸಾವಿರ ಕೋಟಿ ರೂ, ವಕ್ಟ ರಕ್ಷಣೆಗೆ 150 ಕೋಟಿ ರೂ, ಉರ್ದು ಶಾಲೆ ಅಭಿವೃದ್ಧಿಗೆ 100 ಕೋಟಿ 6 ಸಾವಿರ ಇಮಾಮ್‌ಗಳಿಗೆ ಗೌರವಧನ ಹಾಗೂ ಸರ್ಕಾರಿ ಕಾಮಗಾರಿಗಳಲ್ಲಿ ಶೇ 4ರಷ್ಟು ಮುಸ್ಲಿಂ ಸಮುದಾಯಕ್ಕೆ ಮೀಸಲು ಮಾಡುವುದು ಸರಿಯಲ್ಲ’ ಎಂದವರು ಅಭಿಪ್ರಾಯಪಟ್ಟಿದ್ದಾರೆ.
`ತುಷ್ಟೀಕರಣದ ಉತ್ತುಂಗ ಸ್ಥಿತಿಗೆ ತಲುಪಿರುವ ಕೋಮುವಾದಿ ಸಿದ್ದರಾಮಯ್ಯ ಕೈಗಾರಿಕಾ ಪ್ರದೇಶ ಭೂಮಿ ಹಂಚಿಕೆಯಲ್ಲೂ ಮುಸ್ಲಿಮರಿಗೆ ಶೇ 20ರಷ್ಟು ಮೀಸಲಾತಿ ನೀಡಿದ್ದಾರೆ. ರಾಜ್ಯದಲ್ಲಿರುವ ಆಸ್ತಿಗಳ ಮೇಲೆ ವಕ್ಟ ತನ್ನ ವಕ್ರದೃಷ್ಠಿ ಬೀರಿ ಕಬಳಿಸಿದ ನಂತರವೂ ಕೆಐಎಡಿಬಿಯಲ್ಲಿ 20ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಇದರಿಂದ ಇಡೀ ಕೆಐಎಡಿಬಿಯೇ ವಕ್ಫ್ ಆಸ್ತಿ ಎಂದು ಘೋಷಣೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಪ್ರಸಾದ ಹೆಗಡೆ ಹೇಳಿದ್ದಾರೆ.
ಶಾಸಕರ ವಿರುದ್ಧ ಕಿಡಿ
`ಬಿಜೆಪಿ ಚಿಹ್ನೆಯ ಅಡಿ ಶಾಸಕರಾದ ಶಿವರಾಮ ಹೆಬ್ಬಾರ್ ಇದೀಗ ದೃಶ್ಯ ಮಾದ್ಯಮಗಳಲ್ಲಿ ಕಾಂಗ್ರೆಸನ್ನು ಹಾಡಿ ಹೊಗಳುತ್ತಿದ್ದಾರೆ. ಕಾಂಗ್ರೆಸ್ಸಿನ ತುಷ್ಠೀಕರಣ ನೀತಿಯನ್ನು ಸ್ವಾಗತಿಸಿದ ಅವರ ನಡೆ ಬಿಜೆಪಿ ಕಾರ್ಯಕರ್ತರಿಗೆ ಮಾಡಿದ ಅಪಮಾನವಾಗಿದೆ’ ಎಂದು ಪ್ರಸಾದ ಹೆಗಡೆ ಹೇಳಿದ್ದಾರೆ. `ಬಿಜೆಪಿಯಲ್ಲಿದ್ದು ಕಾಂಗ್ರೆಸ್ ಬೆಂಬಲಿಸುವ ಅವರ ವರ್ತನೆಯನ್ನು ಬಿಜೆಪಿ ಖಂಡಿಸಲಿದೆ’ ಎಂದಿದ್ದಾರೆ.
ಕಾoಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ
ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿಗರು ಶಿರಸಿಯಲ್ಲಿ ಮಾರ್ಚ 8ರಂದು ಪ್ರತಿಭಟನೆಗೆ ಕರೆ ನೀಡಿದ್ದಾರೆ. ಬೆಳಗ್ಗೆ 10.30ಕ್ಕೆ ಶಿರಸಿಯ ಶಿವಾಜಿ ಚೌಕದಿಂದ ಉಪವಿಭಾಗಾಧಿಕಾರಿ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕಿ ರೂಪಾಲಿ ನಾಯ್ಕ ಸೇರಿ ಅನೇಕರು ಈ ಪ್ರತಿಭಟನೆಯಲ್ಲಿ ಭಾಗವಹಿಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಹೇಳಿದ್ದಾರೆ.