ದಾಂಡೇಲಿ ನಿರ್ಮಲ ನಗರದ ಆಸ್ಮಾ ಸಯ್ಯದ್ 17ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ.
ಶುಕ್ರವಾರ ಬೆಳಗ್ಗೆ 8 ಗಂಟೆ ಅವಧಿಯಲ್ಲಿ ಅವರು ಶವವಾಗಿ ಪತ್ತೆಯಾಗಿದ್ದಾರೆ. 6 ಗಂಟೆ ಆಸುಪಾಸಿಗೆ ಸಾವನಪ್ಪಿರುವ ಅನುಮಾನಗಳಿವೆ. ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ.
ದಾಂಡೇಲಿ ನಿರ್ಮಲ ನಗರದದಲ್ಲಿ ಆಸ್ಮಾ ವಾಸವಾಗಿದ್ದರು. ಅನುಲುಸ್ಮಾ ಎಂಬ ಹೆಸರಿನಿಂದ ಅವರು ಪರಿಚಿತರಾಗಿದ್ದರು. ಏಕಾಏಕಿ ಅವರು ಸಾವನಪ್ಪಿರುವುದರಿಂದ ಕುಟುಂಬದವರು ಆಘಾತಕ್ಕೆ ಒಳಗಾಗಿದ್ದಾರೆ. ಈ ಸಾವಿನಲ್ಲಿ ಅನುಮಾನವಿರುವ ಬಗ್ಗೆ ಕುಟುಂಬದವರು ಹೇಳಿದ್ದಾರೆ.
ಈ ಬಗ್ಗೆ ದಾಂಡೇಲಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಕೆಯಾಗಿದೆ. ಆಸ್ಮಾರ ತಾಯಿ ತಬುಸುಮ್ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಪಿಎಸ್‌ಐ ಅಮೀನಸಾಬ ಎಮ್ ಅತ್ತಾರ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.




