ಭಟ್ಕಳದ ಶಿರಾಲಿಯಲ್ಲಿ ಗರ್ ಗರ್ ಮಂಡ್ಲ ಎಂಬ ಜೂಜಾಟ ನಡೆಸುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಒಟ್ಟು 26 ಜನ ಸಿಕ್ಕಿ ಬಿದ್ದಿದ್ದಾರೆ!
ಶಿರಾಲಿ ಗ್ರಾಮದ ಕೇಶವಮೂರ್ತಿ ಹಿತ್ಲು ಗದ್ದೆಯ ಜಮೀನಿನಲ್ಲಿ ಮಾರ್ಚ 15ರ ರಾತ್ರಿ ಭಾರೀ ಪ್ರಮಾಣದಲ್ಲಿ ಜೂಜಾಟ ನಡೆಯುತ್ತಿತ್ತು. 11.30ರ ವೇಳೆಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ರನ್ನಗೌಡ ಪಾಟೀಲ್ ಅಲ್ಲಿ ದಾಳಿ ಮಾಡಿದರು. ಪ್ರಭಾವಿಗಳ ಮಾತಿಗೂ ಬಗ್ಗದೇ ಅವರು ಜೂಜಾಟದಲ್ಲಿ ನಿರತ ಎಲ್ಲರ ಮೇಲೆಯೂ ಕಾನೂನು ಕ್ರಮ ಜರುಗಿಸಿದರು.
ಮುಂಡಳ್ಳಿ ಹೊಸ್ಮನೆಯ ಜಗದೀಶ ಶನಿಯಾರ ನಾಯ್ಕ (30), ನಿತ್ಯಾನಂದ ನಾರಾಯಣ ನಾಯ್ಕ (28), ದೇವೇಂದ್ರ ಜಟ್ಟಪ್ಪ ನಾಯ್ಕ (36), ಮುಂಡಳ್ಳಿ ಸತ್ಯನಾರಾಯಣ ನಗರದ ನಿವಾಸಿಗಳಾದ ಹನುಮಂತ ಶನಿಯಾರ ನಾಯ್ಕ (36) ಮತ್ತು ಹನುಮಂತ ಶನಿಯಾರ ನಾಯ್ಕ, ಮುಂಡಳ್ಳಿ ನಿವಾಸಿಗಳಾದ ನಾಗೇಶ ದುರ್ಗಪ್ಪ ನಾಯ್ಕ (30), ನಾಗೇಶ ದುರ್ಗಪ್ಪ ನಾಯ್ಕ ಮತ್ತು ನಾಗರಾಜ ಲಚ್ಮಯ್ಯ ನಾಯ್ಕ, ಮುಟ್ಟಳ್ಳಿ ತಲಾಂದ ನಿವಾಸಿಗಳಾದ ವಿನೋದ ಮಂಜಯ್ಯ ನಾಯ್ಕ (40), ವಿನೋದ ನಾಯ್ಕ, ಮಾದೇವ ನಾಯ್ಕ, ಮಂಗಳ ಗೊಂಡ, ಶ್ರೀನಿವಾಸ ತಿಮ್ಮಯ್ಯ ನಾಯ್ಕ ಮತ್ತು ಮಾದೇವ ನಾಗಪ್ಪ ನಾಯ್ಕ (48) ವಿರುದ್ಧ ಪ್ರಕರಣ ದಾಖಲಾಗಿದೆ.
ಜೊತೆಗೆ ಶಿರಾಲಿ ಚಿತ್ರಾಪುರ ನಿವಾಸಿಗಳಾದ ಗಣಪತಿ ದುರ್ಗಪ್ಪ ಬಾಕಡ (50), ಮಾದೇವ ಬಾಕಡ, ಶ್ರೀಪಾದ ಬಾಕಡ ಮತ್ತು ರಾಮಚಂದ್ರ ನಾರಾಯಣ ಬಾಕಡ, ಭಟ್ಕಳ ಹಳೇ ಬಸ್ ನಿಲ್ದಾಣದ ಅಬು ಕಂಪೌAಡ್ ನಿವಾಸಿ ಅಬ್ದುಲ್ ಗಫೂರ್ ಕೊಚ್ಚಪ್ಪ ಇಕ್ಕೇರಿ, ಮುಂಡಳ್ಳಿ ನೀರಗದ್ದೆಯ ಅನಿಲ ನಾಯ್ಕ , ಚೌತನಿ ನಿವಾಸಿಗಳಾದ ವಿನಾಯಕ ಪಾಂಡುರAಗ ನಾಯ್ಕ, ರಾಮಚಂದ್ರ ನಾಯ್ಕ, ವಿಠ್ಠಲ ನಾಯ್ಕ, ಮಾಸ್ತಯ್ಯ ನಾಯ್ಕ ಮತ್ತು ಭರತ ರಾಮಾ ನಾಯ್ಕ, ಮುಂಡಳ್ಳಿ ಚರ್ಚ್ ಕ್ರಾಸ್ ನಿವಾಸಿ ಸದಾಶಿವ ನಾಗಪ್ಪ ನಾಯ್ಕ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.