ದಾoಡೇಲಿ ನಗರದ ಬರ್ಚಿ ರಸ್ತೆಯಲ್ಲಿ ಲಾರಿಯೊಂದರ ಬ್ರೆಕ್ ಫೇಲ್ ಆಗಿದೆ. ಪರಿಣಾಮ ಎರಡು ದ್ವಿಚಕ್ರ ವಾಹನಗಳಿಗೆ ಲಾರಿ ಗುದ್ದಿದೆ.
ಭಾನುವಾರ ಬರ್ಚಿ ರಸ್ತೆಯ ಕನ್ಯಾವಿದ್ಯಾಲಯದ ಮುಂಭಾಗ ಲಾರಿ ಚಲಿಸುತ್ತಿತ್ತು. ಚಾಲಕ ಬ್ರೆಕ್ ಅದುಮಿದರೂ ಲಾರಿ ನಿಲ್ಲದ ಕಾರಣ ಒಂದು ಸ್ಕೂಟಿ ಹಾಗೂ ಇನ್ನೊಂದು ಬೈಕಿಗೆ ಲಾರಿ ಗುದ್ದಿತು. ಅದಾದ ನಂತರ ಪಕ್ಕದ ಇಡ್ಲಿ ಕಫೆಗೆ ಡಿಕ್ಕಿ ಹೊಡೆದು ಲಾರಿ ನಿಂತಿತು.
ಅಪ್ಪು ಇಡ್ಲಿ ಕಫೆಯಲ್ಲಿದ್ದ ವ್ಯಕ್ತಿಯೊಬ್ಬರಿಗೆ ಈ ಅಪಘಾತದಲ್ಲಿ ಸಣ್ಣ ಗಾಯವಾಗಿದೆ. ಅದನ್ನು ಹೊರತುಪಡಿಸಿ ಎರಡು ಬೈಕ್ ಜಖಂ ಆಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.