ಕಾರವಾರದಲ್ಲಿ ಗುಣಾತ್ಮಕ ಕಂಪ್ಯುಟರ್ ಶಿಕ್ಷಣ ನೀಡುತ್ತಿರುವ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಮಾರ್ಚ ತಿಂಗಳಿನಲ್ಲಿ ನಡೆದ ಟೈಪಿಂಗ್ ಮತ್ತು ಶಾರ್ಟಹೆಂಡ್ ಪರೀಕ್ಷೆಯಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ ಪರೀಕ್ಷೆಯಲ್ಲಿ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆಯ ವಿನಾಯಕ ರಾಮು ಗೌಡ, ದಿವ್ಯ ಗಜಾನನ ನಾಯ್ಕ, ಅಂಕಿತಾ ಮಹಾಬಲೇಶ್ವರ ಗೌಡ, ಅಂಕಿತಾ ಬಾಬು ಗೌಡ, ಕಿರಣ್ ಜೀವನ್ ಗೌಡ, ದರ್ಶನ್ ಶೇಖರ್ ಕಟ್ಟಿಮನಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಇದರೊಂದಿಗೆ ಸಂಸ್ಥೆಯ ಆರು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ. ಎಂಟು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಪ್ರಾಚಾರ್ಯ ಪ್ರಸನ್ನ ತೆಂಡೂಲ್ಕರ ಹರ್ಷವ್ಯಕ್ತಪಡಿಸಿದ್ದು, ಅವರೆಲ್ಲರೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.