ಯಲ್ಲಾಪುರದ ಕಿರವತ್ತಿಯಲ್ಲಿನ ಜಯ ಕರ್ನಾಟಕ ಸಂಘಟನೆ ಅಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ವಿವಿಧ ಲೇಖನ ಸಾಮಗ್ರಿ ಪೂರೈಸಿದೆ. ಆ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಕೋರಿದೆ.
ಪರೀಕ್ಷೆ ಎದುರಿಸುವ ಮಕ್ಕಳಿಗೆ ಪರೀಕ್ಷಾ ಪ್ಯಾಡ್, ಪೆನ್ನುಗಳನ್ನು ಸಂಘಟನೆ ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ವಿತರಿಸಿದರು. `ಉತ್ತಮ ಅಂಕಪಡೆದು ಶಾಲೆಯ ಹಿರಿಮೆ ಹೆಚ್ಚಿಸಿ’ ಎಂದು ಈ ವೇಳೆ ಅವರು ಕರೆ ನೀಡಿದರು. ಮೊದಲ ಐದು ಸ್ಥಾನಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದಾಗಿಯೂ ಅವರು ಘೋಷಿಸಿದರು.
ಸಂಘಟನೆಯ ಪ್ರಮುಖರಾದ ಸುಮಂಗಲಾ ಹಣಮರೆಡ್ಡಿ, ಶಾಹಿನ ಮುಜಾವರ, ಫಾತಿಮಾ ಶೇಖ್, ಸುಭಾಶ ಡಿ ಎಚ್, ಬಾಬಾಜಾನ್ ಶೇಖ್, ಮುನೀರ ಪಟೇಲ್, ಫಾತಿಮಾ ದರ್ವೇಶ, ರಜಬಲಿ ಒಂಟಿ, ಸಾಧೀಕ ಖಾಜಿ, ಬಸವರಾಜ ಮಂಗಳಿ ಇತರರು ಇದ್ದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಚೆನ್ನಪ್ಪ ಡಿ ಎಚ್ ಅವರು ಸಂಘಟನೆ ಕಾರ್ಯವನ್ನು ಶ್ಲಾಘಿಸಿದರು.