ಯಲ್ಲಾಪುರದ ಹುತ್ಕಂಡ ಕ್ರಾಸಿನಲ್ಲಿ ಗ್ರಾ ಪಂ ಸದಸ್ಯ ಸುಬ್ರಹ್ಮಣ್ಯ ಉದ್ದಾಬೈಲ್ ಅಧ್ಯಕ್ಷತೆಯಲ್ಲಿ ಸಂಘಟಿಸಿದ ನಾಟಕ ದುಶ್ಚಟಗಳ ಕುರಿತು ಅರಿವು ಮೂಡಿಸುವುದರ ಮೂಲಕ ಸಾಮಾಜಿಕ ಸಂದೇಶ ಸಾರಿದೆ.
ಶನಿವಾರ ರಾತ್ರಿ ಹುತ್ಕಂಡದಲ್ಲಿ `ಅಣ್ಣ ಹಚ್ಚಿದ ರಕ್ತ ತಿಲಕ’ ನಾಟಕ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಕಾಮಾಲೆಗೆ ಔಷಧಿ ನೀಡುವ ಗಂಗಾ ಹೆಗಡೆ ಕಬ್ಬಿನಗದ್ದೆ ಹಾಗೂ ಜಲ ಶೋಧಕ ದಾಮೋದರ ಭಟ್ಟ ದೇವಸ ಅವರನ್ನು ಗೌರವಿಸಲಾಯಿತು. ಟಿಎಸ್‌ಎಸ್ ನಿರ್ದೇಶಕ ಕೃಷ್ಣ ಹೆಗಡೆ ಜೂಜನಬೈಲ್ ನಾಟಕದಲ್ಲಿ ಖಳನಾಯಕನಾಗಿ ಅಭಿನಯಿಸಿದರು. ಹುತ್ಕಂಡದ ಚಂದ್ರಶೇಖರ ಭಟ್ಟ, ಸುಬ್ರಹ್ಮಣ್ಯ ಉದ್ದಾಬೈಲ್, ಹರಿಪ್ರಸಾದ ಜೂಜನಬೈಲ್, ಉಪಳೇಶ್ವರದ ಸಂತೋಷ ನಾಯ್ಕ, ಶಿವಾನಂದ ಪಟಗಾರ ಹಾಗೂ ನರಸಿಂಹ ಭಟ್ಟರು ವಿವಿಧ ಪಾತ್ರಗಳನ್ನು ನಿಭಾಯಿಸಿದರು.
ಕಬ್ಬಿನಗದ್ದೆಯ ರಾಘವೇಂದ್ರ ಭಟ್ಟ, ಎಂ ಎಸ್ ಹೆಗಡೆ ಪುರಾಣಜಡ್ಡಿ, ಸುಬ್ಬಣ್ಣ ದ್ಯಾನನಕೊಪ್ಪ, ನಾರಾಯಣ ಭಟ್ಟ ಗೌಳಿವಾಡ, ಅಭಿಷೇಕ ರಜಪೂತ ಹಾಗೂ ಆರ್ ಜಿ ಭಟ್ಟ ಬೆಳಸೂರು ಬಗೆ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಂಡರು. ಕುಮಟಾದ ಗೋಪಾಲಕೃಷ್ಣ ಡ್ರಾಮಾ ಸೀನ್ಸನ ನಂದಾ ನಾಯ್ಕ ರಂಗ ಸಜ್ಜಿಕೆ ನಿರ್ಮಿಸಿದ್ದರು. ನೇತ್ರಾ ಹುಬ್ಬಳ್ಳಿ, ಚಂದ್ರಕಲಾ ದಾವಣಗೆರೆ ಹಾಗೂ ಕಾವ್ಯ ಭದ್ರಾವತಿ ಸ್ತಿ ಪಾತ್ರದಲ್ಲಿ ಮಿಂಚಿದರು.
ಕುಟುoಬದಲ್ಲಿನ ಸದಸ್ಯರಿಗೆ ಹಣ, ಹೆಣ್ಣಿನ ವ್ಯಾಮೋಹ ತೋರಿಸಿ ದುಷ್ಟಚಟಗಳಿಗೆ ಬೀಳಿಸುವುದು ಹಾಗೂ ಆ ಬಲೆಯಿಂದ ತಪ್ಪಿಸಿಕೊಳ್ಳವ ವಿಧಾನದ ಬಗ್ಗೆ ನಾಟಕ ಸಂದೇಶ ಸಾರಿತು. ಅಧಿಕಾರಕ್ಕಾಗಿ ಅಡ್ಡದಾರಿ ಹಿಡಿಯುವವರಿಗೂ ಈ ನಾಟಕದ ಮೂಲಕ ಎಚ್ಚರಿಕೆರವಾನಿಸಲಾಯಿತು. ಮಹಾಗಣಪತಿ ಕಲಾಬಳಗದ ಗೌರವ ಅಧ್ಯಕ್ಷ ನಾಗರಾಜ ಭಟ್ಟ ಕವಡಿಕೆರೆ ನಾಟಕ ವೀಕ್ಷಿಸಿ ಮೆಚ್ಚುಗೆವ್ಯಕ್ತಪಡಿಸಿದರು.