ಆಫ್ರಿಕಾ ದೇಶದ ಖಾಪ್ರಿ ದೇವರು ತಲತಲಾಂತರದಿoದ ಕಾಳಿ ಸಂಗಮ ಪ್ರದೇಶದಲ್ಲಿ ವಾಸವಾಗಿದ್ದು, ಈ ದೇವರಿಗೆ ಸಿಗರೇಟಿನ ಆರತಿ, ಸರಾಯಿ ಅಭಿಷೇಕ ಮಾಡುವುದು ವಿಶೇಷ!
ಕಾರವಾರದ ಕಾಳಿ ಸಂಗಮ ಪ್ರದೇಶದಲ್ಲಿರುವ ಖಾಪ್ರಿ ದೇವಸ್ಥಾನದಲ್ಲಿ ವರ್ಷಕ್ಕೆ ಒಮ್ಮೆ ಜಾತ್ರೆ ನಡೆಯುತ್ತದೆ. ಎಲ್ಲಾ ಕಡೆ ಹಾಲು, ಹೂವು, ಹಣ್ಣುಗಳನ್ನು ದೇವರಿಗೆ ಅರ್ಪಿಸಿದರೆ ಖಾಪ್ರಿ ದೇವರು ಅದಕ್ಕಿಂತ ವಿಭಿನ್ನ. ದೇಶ-ವಿದೇಶಗಳಿಂದ ಜಾತ್ರೆಗೆ ಬರುವ ಭಕ್ತರು ಬಗೆ ಬಗೆಯ ಮದ್ಯ ಹಿಡಿದು ತರುತ್ತಾರೆ. ಭಕ್ತಿಯಿಂದ ಅದನ್ನು ದೇವರಿಗೆ ಸಲ್ಲಿಸಿ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸುತ್ತಾರೆ.
ನಗರದಿಂದ 3ಕಿಮೀ ದೂರದಲ್ಲಿ ಖಾಪ್ರಿ ದೇವರ ದೇಗುಲವಿದೆ. ರಾಷ್ಟಿçÃಯ ಹೆದ್ದಾರಿ ಅಂಚಿನಲ್ಲಿರುವ ಈ ದೇವರು `ಹೆದ್ದಾರಿಯಲ್ಲಿನ ಅಪಘಾತ ಆಗದಂತೆ ನೋಡಿಕೊಳ್ಳುವವ’ ಎಂಬ ನಂಬಿಕೆಯಿದೆ. ಜೊತೆಗೆ `ಮೀನುಗಾರರಿಗೆ ತೆರಳುವ ಮೀನುಗಾರರನ್ನು ರಕ್ಷಣೆ ಮಾಡುವವ’ ಎಂದು ಜನ ನಂಬಿದ್ದಾರೆ.
ಆಫ್ರಿಕಾದ ಖಾಫ್ರಿ ದೇವರು ಕೋಡಿಭಾಗದಲ್ಲಿ ಸ್ಥಾಪನೆಯಾಗುವುದರ ಹಿಂದೆ ದಂತಕಥೆಯೊoದು ಚಾಲ್ತಿಯಲ್ಲಿದೆ. `ಪುರ್ಸಪ್ಪ ಮನೆತನದ ಈ ದೇವರು ಮೊದಲು ಮಾನವನಾಗಿದ್ದರು. 300 ವರ್ಷಗಳ ಹಿಂದೆ ಆಫ್ರಿಕಾದಿಂದ ಬಂದ ವ್ಯಕ್ತಿಯೊಬ್ಬರು ಇಲ್ಲಿ ಪೂಜೆ ಮಾಡುತ್ತಿದ್ದರು. ಒಮ್ಮೆ ಏಕಾಏಕಿ ಆ ವ್ಯಕ್ತಿ ಕಾಣೆಯಾಗಿದ್ದು ನಂತರ ಪರ್ಸಪ್ಪ ಎಂಬಾತರ ಕನಸಿನಲ್ಲಿ ಬಂದು ತಾನು ದೇವರಾಗಿರುವದಾಗಿ ತಿಳಿಸಿದರು. ತನ್ನ ಇಷ್ಟಾರ್ಥದಂತೆ ಪೂಜೆ ಸಲ್ಲಿಸಿದರೆ ನಂಬಿದ ಜನರನ್ನು ಆಶೀರ್ವದಿಸುವದಾಗಿ ಹೇಳಿದ್ದು, ಅಂದಿನಿoದ ಈವರೆಗೂ ಪ್ರತಿ ಭಾನುವಾರ ಹಾಗೂ ಬುಧವಾರ ಇಲ್ಲಿ ಪೂಜೆ ನಡೆಯುತ್ತಿದೆ’ ಎಂದು ಸ್ಥಳೀಯರು ವಿವರಿಸುತ್ತಾರೆ.
`ಖಾಫ್ರಿ ದೇವರು ಪುರ್ಸಪ್ಪ ಮನೆತನದ ದೇವರಾದರೂ ನಂಬಿ ಬಂದ ಎಲ್ಲ ಭಕ್ತಿರಿಗೂ ಆಶೀರ್ವಾದ ಶತಸಿದ್ಧ. ಸಾರಾಯಿ, ಸಿಗರೇಟನ್ನು ಹರಕೆಯಾಗಿ ನೀಡಿದರೆ ಇಷ್ಟಾರ್ಥ ಸಿದ್ದಿ ಖಚಿತ’ ಎಂಬುದು ಅಲ್ಲಿನವರ ಅನುಭವ. ಈ ದೇವಾಲಯಕ್ಕೆ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ನರು ಅತ್ಯಂತ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಭಾನುವಾರ ಈ ದೇವರ ಜಾತ್ರೆ ನಡೆದಿದ್ದು, ಸಾವಿರಾರು ಭಕ್ತರು ಆಗಮಿಸಿ ಸಿಗರೇಟು-ಸರಾಯಿ ಅರ್ಪಿಸಿ ದೇವರ ಹರಕೆ ತೀರಿಸಿದರು. ಬೆಳಗ್ಗೆಯಿಂದ ಸಂಜೆಯವರೆಗೂ ಕಿಕ್ಕಿರಿದು ಜನ ಆಗಮಿಸುತ್ತಿದ್ದರು.