ಶಿರಸಿಯ ಲಾಲಗೌಡರ ನಗರದಲ್ಲಿನ ಕಸದಗುಡ್ಡೆಯಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಆರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ.
ವೈದ್ಯಕೀಯ ತ್ಯಾಜ್ಯಕ್ಕೆ ಬೆಂಕಿ ತಗುಲಿದ ಅನುಮಾನವಿದ್ದು, ಅಕ್ಕ-ಪಕ್ಕದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಸುತ್ತಲಿನ ಮನೆಯೊಳಗೆ ಭಾರೀ ಪ್ರಮಾಣದ ಹೊಗೆ ಬರುತ್ತಿರುವುದರಿಂದ ಜನ ತೊಂದರೆ ಅನುಭವಿಸಿದರು. ಅಗ್ನಿ ಅವಘಡಕ್ಕೆ ಕಾರಣ ಗೊತ್ತಾಗಿಲ್ಲ.
ಅಗ್ನಿಶಾಮಕ ಸಿಬ್ಬಂದಿ ಜೊತೆ ಪೊಲೀಸರು ಸ್ಥಳದಲ್ಲಿದ್ದಾರೆ. ಕಸದಗುಡ್ಡೆಯಿಂದ ಕೆಟ್ಟ ವಾಸನೆ ಜೊತೆ ಹೊಗೆಯೂ ಬರುತ್ತಿರುವುದು ಇಲ್ಲಿನವರ ನಿದ್ದೆಗೆಡಿಸಿದೆ. ಎರಡು ವರ್ಷಗಳ ಹಿಂದೆಯೂ ಇಲ್ಲಿ ಅಗ್ನಿ ಅವಘಡ ನಡೆದಿತ್ತು. ಆಗಲೂ ಜನ ಸಮಸ್ಯೆ ಅನುಭವಿಸಿ ಪ್ರತಿಭಟಿಸಿದ್ದರು.