ಕಾರವಾರದ ಸದಾಶಿವಗಡದಲ್ಲಿರುವ ಲಯನ್ಸ ಕ್ಲಬ್ ನಿರಂತರವಾಗಿ ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸುತ್ತಿದೆ. ಲಯನ್ಸ ಕಾರ್ಯವನ್ನು ಸಂಸ್ಥೆಯ ಡಿಸ್ಟ್ರಿಕ್ಟ್ ಗೌರ್ನರ್ ಮನೋಜ ಮಾಣಿಕ್ ಕೊಂಡಾಡಿದ್ದಾರೆ.
ಸದಾಶಿವಗಡದ ಲಯನ್ಸ ಕ್ಲಬ್ ಶಾಲೆಗಳಿಗೆ ಶೌಚಾಲಯ ನಿರ್ಮಾಣ ಮಾಡಿದೆ. ಅಂಗನವಾಡಿ ಕೇಂದ್ರಗಳಿಗೆ ಖುರ್ಚಿಗಳನ್ನು ದೇಣಿಗೆ ನೀಡಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿದೆ. ಅನಾರೋಗ್ಯಕ್ಕೆ ಒಳಗಾದವರಿಗೆ ಆರ್ಥಿಕ ನೆರವು, ಗ್ರಾಮೀಣ ಶಿಕ್ಷಣಕ್ಕೆ ಪ್ರೋತ್ಸಾಹ, ಪ್ರತಿಭಾ ಪುರಸ್ಕಾರ, ದೇವಾಲಯಗಳಿಗೆ ಅಗತ್ಯ ಮಂಟಪ ನಿರ್ಮಾಣ ಸೇರಿ ಹಲವು ಬಗೆಯ ಕೆಲಸ ಮಾಡಿದೆ.
ಕಾರವಾರ ಸದಾಶಿವಗಡ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ಬಿನ ಡಿಸ್ಟ್ರಿಕ್ಟ್ ಗೌರ್ನರ್ ವಾರ್ಷಿಕ ಭೇಟಿ ಅಂಗವಾಗಿ ಅಸ್ನೋಟಿಯ ಶಿವಾಜಿ ವಿದ್ಯಾಮಂದಿರಕ್ಕೆ ಭೇಟಿ ನೀಡಿದರು. ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮನೋಜ ಮಾಣಿಕ್ ಅವರು `ಲಯನ್ಸ ಕ್ಲಬ್ ಸದಾ ಸಾಮಾಜಿಕ ಸೇವೆ ಮಾಡುತ್ತ ಬಂದಿದೆ. ಈ ಸೇವೆ ಹೀಗೆ ಮುಂದುವರೆಯಲಿ’ ಎಂದು ಆಶಿಸಿದರು. ಈ ವೇಳೆ ಶಿವಾಜಿ ಬಾಲಕರ ವಸತಿ ನಿಲಯ ಚಾವಣಿ ದುರಸ್ತಿಗಾಗಿ 50 ಸಾವಿರ ರೂ ನೀಡುವುದಾಗಿ ಘೋಷಿಸಿದರು.
ಲಯನ್ಸ ಕ್ಲಬ್ಬಿನ ರಿಝನಲ್ ಛೇರಪರ್ಸನ ಆರ್ ಎಚ್ ನಾಯಕ ಮಾತನಾಡಿ `ಸದಾಶಿವಗಡ ಲಯನ್ಸ್ ಅಧ್ಯಕ್ಷ ಗಣೇಶ ಬೀಷ್ಠಣ್ಣನವರ್ ಅವರು ಉತ್ತಮ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿ’ ಎಂದು ಶ್ಲಾಘಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಗಣೇಶ ಎನ್ ಬಿಷ್ಟಣ್ಣನವರ ಮಾತನಾಡಿ `ಕ್ಲಬ್ ಸದಸ್ಯರ ಕೊಡುಗೆಯೇ ಸಾಧನೆಗೆ ಸ್ಪೂರ್ತಿ’ ಎಂದರು.
ಪ್ರಮುಖರಾದ ವಿನಯಾ ವಿನೋದ ನಾಯ್ಕ ಮಾತನಾಡಿದರು. ಲಯನ್ಸ ಸದಸ್ಯರಾದ ರಕ್ಷಾ ಮಾಣಿಕ್, ಅಹಲ್ಯಾ ನಾಯಕ, ಲಿಯೋ ಕ್ಲಬ್ ಅಧ್ಯಕ್ಷ ಗಣೇಶ ನಾಯ್ಕ, ರಿದೀಶಾ ಗಾಂವಕರ, ನಾಗವೇಣಿ ತಳೇಕರ ಉಪಸ್ಥಿತಿರಿದ್ದರು. ಜೆ ಬಿ ತಿಪ್ಪೇಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಸಂದೀಪ್ ಅಣ್ವೇಕರ ಧ್ವಜವಂದನೆ ಮಾಡಿದರು. ರೋಶನ್ ರೇವಣಕರ ವಂದಿಸಿದರು. ಸುನೀಲ್ ಐಗಳ್ ನಿರ್ವಹಿಸಿದರು.