ಹಳಿಯಾಳದ ಸಮಾಜ ಸೇವಕ ಅನಿಲ ನಾಯ್ಕ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಬೆಳ್ಳಿ-ಬಂಗಾರ ಸೇರಿ ಬಗೆ ಬಗೆಯ ಒಡವೆಗಳನ್ನು ಕಳ್ಳರು ದೋಚಿದ್ದಾರೆ.
ಅನೀಲ ನಾಯ್ಕ ಅವರು ಹಳಿಯಾಳದ ಮುರ್ಕುವಾಡದಲ್ಲಿ ಮನೆ ಮಾಡಿಕೊಂಡಿದ್ದರು. ಮಾರ್ಚ 18ರಂದು ಅವರು ತಾಯಿ ಹಾಗೂ ತಂಗಿ ಜೊತೆ ಬೆಂಗಳೂರಿಗೆ ಹೋಗಿದ್ದರು. ಇದಕ್ಕೂ ಮುನ್ನ ಅವರ ಅಣ್ಣ ಗೋಕರ್ಣಕ್ಕೆ ತೆರಳಿದ್ದರು. ಮರಳಿ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿತ್ತು.
ಮನೆಯಿಂದ ಹೊರಡುವ ಮುನ್ನ ಅನಿಲ ನಾಯ್ಕ ಅವರು ಹಿಂದಿನ ಬಾಗಿಲಿಗೆ ಚಿಲಕ ಹಾಕಿದ್ದರು. ಮನೆ ಮುಂದಿನ ಬಾಗಿಲಿಗೆ ಬೀಗ ಅಳವಡಿಸಿದ್ದರು. ಸಾಕಷ್ಟು ಭದ್ರತೆ ಮಾಡಿಕೊಂಡಿದ್ದರೂ ಕಳ್ಳರು ಅದನ್ನು ಬೇದಿಸಿ ಮನೆಯೊಳಗೆ ನುಗ್ಗಿದರು. ಬಂಗಾರದ ನೆಕ್ಲೆಸ್, ಚಿನ್ನದ ಬಳೆ, ಬೆಳ್ಳಿಯ ಕಾಲು ಚೈನು ಸೇರಿ 1.47 ಲಕ್ಷ ರೂ ಮೌಲ್ಯದ ಆಭರಣವನ್ನು ಕಳ್ಳರು ಅಪಹರಿಸಿದರು.
ಸೂಚನೆ: ಮನೆ ಬಿಟ್ಟು ಹೋಗುವಾಗ ಪೊಲೀಸರಿಗೆ ಮಾಹಿತಿ ಕೊಡಿ