6
  • Latest
Relatives fed up with doctors' advice: Wedding invitation at lunchtime!

ವೈದ್ಯರ ಯೋಚನೆಗೆ ಬಂಧು-ಬಳಗದವರು ಫೀದಾ: ಊಟದ ತಾಟಿನಲ್ಲಿ ಮದುವೆ ಆಮಂತ್ರಣ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ವೈದ್ಯರ ಯೋಚನೆಗೆ ಬಂಧು-ಬಳಗದವರು ಫೀದಾ: ಊಟದ ತಾಟಿನಲ್ಲಿ ಮದುವೆ ಆಮಂತ್ರಣ!

AchyutKumar by AchyutKumar
March 24, 2025
in ಸ್ಥಳೀಯ
Relatives fed up with doctors' advice: Wedding invitation at lunchtime!
advt advt advt
ADVERTISEMENT

ಮೊದಲ ಮಗಳ ಮದುವೆಗೆ ಬಿಳಿ ಬಣ್ಣದ ಕರವಸ್ತ್ರ ನೀಡಿ ಆಮಂತ್ರಣ ನೀಡಿದ್ದ ಶಿರಸಿಯ ಪಶುವೈದ್ಯ ಡಾ ಪಿ ಎಸ್ ಹೆಗಡೆ ಅವರು ಎರಡನೇ ಮಗಳ ಮದುವೆಗೆ ಊಟದ ತಾಟಿನಲ್ಲಿ ಆಮಂತ್ರಣ ಮುದ್ರಿಸಿ ಕರೆಯೋಲೆ ನೀಡುತ್ತಿದ್ದಾರೆ.

ಶಿರಸಿ ತಾಲೂಕಿನ ಹೊನ್ನೆಗದ್ದೆಯ ಪರಮೇಶ್ವರ ಹೆಗಡೆ ಅವರು ಪಶು ವೈದ್ಯರು. ಬೇರೆ ಬೇರೆ ಊರುಗಳಲ್ಲಿ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಿದ ಅವರು 1989ರಲ್ಲಿ ಶಿರಸಿಗೆ ಮರಳಿದರು. ಸರ್ಕಾರಿ ಸೇವೆಯನ್ನು ತ್ಯಜಿಸಿದ ನಂತರ `ಸಮರ್ಪಣಾ’ ಎಂಬ ಹೆಸರಿನಲ್ಲಿ ಸ್ವಂತ ಪಶು ವೈದ್ಯಕೀಯ ಚಿಕಿತ್ಸಾಲಯ ಶುರು ಮಾಡಿದರು. ಸದ್ಯ ಟಿಎಸ್‌ಎಸ್ ರಸ್ತೆಯ ಮಾರುಕಟ್ಟೆ ಯಾರ್ಡಿನ `ಸಮರ್ಪಣಾ’ ಚಿಕಿತ್ಸಾಲಯದಲ್ಲಿ ಅವರು ಮಾತಿಗೆ ಸಿಗುತ್ತಾರೆ.

Advertisement. Scroll to continue reading.
ADVERTISEMENT
ADVERTISEMENT

ಸದಾ ವಿಭಿನ್ನವಾಗಿ ಯೋಜಿಸುವ ಪಿ ಎಸ್ ಹೆಗಡೆ ಅವರು 2019ರಲ್ಲಿ ತಮ್ಮ ಮೊದಲ ಮಗಳ ಮದುವೆ ಮಾಡಿದರು. ಆಗ, ಎಲ್ಲರೂ ಬಳಸುವ ಕರ್ಚಿಪ್’ನಲ್ಲಿ ಆಮಂತ್ರಣ ಪತ್ರಿಕೆ ಮುದ್ರಿಸಿದ್ದರು. ಆ ವೇಳೆ ಅವರು ಮಾಡಿಸಿದ ಆಮಂತ್ರಣ ಅತ್ಯಂತ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಸದ್ಯ ಅವರು ತಮ್ಮ ಎರಡನೇ ಮಗಳ ಮದುವೆ ತಯಾರಿಯಲ್ಲಿದ್ದು, ಈಗಲೂ ಎಲ್ಲರೂ ಬಳಸುವ ಊಟದ ತಾಟಿನಲ್ಲಿ ಆಮಂತ್ರಣ ಮುದ್ರಿಸಿದ್ದಾರೆ.

Advertisement. Scroll to continue reading.

ಊಟದ ತಾಟಿನಲ್ಲಿ ಆಮಂತ್ರಣ ಮುದ್ರಿಸಬೇಕು ಎಂದು ಎಲ್ಲಾ ಕಡೆ ಓಡಾಡಿದ ಅವರಿಗೆ ಎಲ್ಲಿಯೂ ಸರಿಯಾದ ಸ್ಪಂದನೆ ಸಿಗಲಿಲ್ಲ. ಕೊನೆಯದಾಗಿ ಅವರು ಶಿರಸಿ ಹಳೆ ಬಸ್ ನಿಲ್ದಾಣ ಬಳಿಯ ಎಕ್ಸಿಸ್ ಬ್ಯಾಂಕ್ ಎದುರಿನ `ಗ್ರಾಫಿಕ್ಸ್’ ಮಳಿಗೆಗೆ ಭೇಟಿ ನೀಡಿದರು. ತಮ್ಮ ವಿಚಾರವನ್ನು ಅಲ್ಲಿನ ವಿಶಾಲ ಹಾಗೂ ಆದರ್ಶ ಜೈವಂತ್ ಅವರ ಮುಂದಿಟ್ಟರು. ಬೇಡಿಕೆಗೆ ಅನುಗುಣವಾಗಿ `ಗ್ರಾಫಿಕ್ಸ್’ ಮಳಿಗೆಯವರು ಊಟದ ತಾಟಿನ ಮೇಲೆ ಆಮಂತ್ರಣ ಮುದ್ರಿಸಿಕೊಟ್ಟರು.

ಸರಿ ಸುಮಾರು 400 ಆಮಂತ್ರಣ ಪತ್ರಿಕೆಯನ್ನು ಪಿ ಎಸ್ ಹೆಗಡೆ ಅವರು ಮುದ್ರಿಸಿದ್ದಾರೆ. 10 ಇಂಚಿನ ಊಟದ ತಾಟಿನಲ್ಲಿ ಅಂದವಾದ ಆಮಂತ್ರಣ ಪತ್ರಿಕೆ ಮೂಡಿ ಬಂದಿದೆ. 85ರೂ ದರದಲ್ಲಿ ಈ ಆಮಂತ್ರಣ ಪತ್ರಿಕೆಯನ್ನು `ಗ್ರಾಫಿಕ್ಸ್’ ಮಳಿಗೆಯವರು ಸಿದ್ದಪಡಿಸಿಕೊಟ್ಟಿದ್ದಾರೆ. ಆ ಆಮಂತ್ರಣ ಪತ್ರಿಕೆಗಳನ್ನು ಹಿಡಿದು ಪಿ ಎಸ್ ಹೆಗಡೆ ಅವರು ಮದುವೆ ಕರೆಯ ಶುರು ಮಾಡಿದ್ದಾರೆ.

ShareSendTweetShare
ADVERTISEMENT
Previous Post

ಮರದಿಂದ ಬಿದ್ದ ಮಹಿಳೆಗೆ ರಕ್ತದ ವಾಂತಿ: ಸಾವು!

Next Post

ಯಾವ ತುಪ್ಪ ಅಸಲಿ.. ಯಾವ ತುಪ್ಪ ನಕಲಿ? ಈ ಪ್ರಯೋಗ ಮನೆಯಲ್ಲಿ ಮಾಡಿ ನೋಡಿ!

Next Post
Which ghee is real and which is fake Try this experiment at home!

ಯಾವ ತುಪ್ಪ ಅಸಲಿ.. ಯಾವ ತುಪ್ಪ ನಕಲಿ? ಈ ಪ್ರಯೋಗ ಮನೆಯಲ್ಲಿ ಮಾಡಿ ನೋಡಿ!

Mother of a little child who wrote the SSLC exam

SSLC ಪರೀಕ್ಷೆ ಬರೆದ ಪುಟ್ಟ ಬಾಣಂತಿ!

A government fan that doesn't turn even though there is power!

ಕರೆಂಟ್ ಇದ್ದರೂ ತಿರುಗದ ಸರ್ಕಾರಿ ಫ್ಯಾನು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.