ಅಂಕೋಲಾದ ಸುಮನಾ ಆಗೇರ್ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದಾರೆ. ಗೇರು ಮರದಿಂದ ಬಿದ್ದ ಅವರು ರಕ್ತದ ವಾಂತಿ ಮಾಡಿಕೊಂಡು ಸಾವನಪ್ಪಿದ ಬಗ್ಗೆ ಅವರ ಪತಿ ಆನಂದು ಆಗೇರ್ ತಿಳಿಸಿದ್ದಾರೆ. ಅದಾಗಿಯೂ ಈ ಸಾವಿನಲ್ಲಿ ಅನುಮಾನವಿರುವುದಾಗಿ ಸುಮನಾ ಆಗೇರ್ ಅವರ ಸಹೋದರ ಗಿರಿಧರ್ ಆಗೇರ್ ಸಂಶಯವ್ಯಕ್ತಪಡಿಸಿದ್ದಾರೆ.
ಅ0ಕೋಲಾ ಅವರ್ಸಾ ಬಳಿ ಸುಮನಾ ಆಗೇರ್ (35) ಹಾಗೂ ಆನಂದು ಆಗೇರ್ ವಾಸವಾಗಿದ್ದರು. ಫೆ 22ರಂದು ಗೇರು ಬೀಜ ಕೊಯ್ಯಲು ಅವರಿಬ್ಬರು ಹಟ್ಟಿಕೇರಿಯ ಬೆರಡೆಗುಡ್ಡಕ್ಕೆ ತೆರಳಿದ್ದರು. ಈ ವೇಳೆಯಲ್ಲಿಯೇ ಸುಮನಾ ಆಗೇರ್ ಸಾವನಪ್ಪಿದ್ದಾರೆ.
ಆನಂದು ಆಗೇರ್ ಅವರ ಪ್ರಕಾರ ಆ ದಿನ ಮಧ್ಯಾಹ್ನ ಸುಮನಾ ಆಗೇರ್ ಅವರಿಗೆ ತಲೆಸುತ್ತು ಕಾಣಿಸಿಕೊಂಡಿದೆ. ಗೇರು ಮರ ಏರಿದ್ದ ಅವರು ಮರದಿಂದ ಬಿದ್ದಿದ್ದಾರೆ. ಅದಾದ ನಂತರ ವಾಂತಿ ಮಾಡಿಕೊಂಡಿದ್ದು, ನಂತರ ರಕ್ತ ಕಾರಿಕೊಂಡು ಸಾವನಪ್ಪಿದ್ದಾರೆ.
ಆದರೆ, ತಮ್ಮ ಸಹೋದರಿ ಸಾವಿನಲ್ಲಿ ಸಂಶಯವಿದೆ ಎಂದು ಅಂಕೋಲಾ ವಾಸರಕುದ್ರುಗಿಯ ಗಿರಿಧರ್ ಆಗೇರ್ ಪೊಲೀಸರಿಗೆ ಹೇಳಿದ್ದಾರೆ. ಈ ಬಗ್ಗೆ ತನಿಖೆಗಾಗಿ ಅವರು ಪೊಲೀಸ್ ಪ್ರಕರಣವನ್ನು ದಾಖಲಿಸಿದ್ದಾರೆ.