ಹಳಿಯಾಳದ ಮುರ್ಕವಾಡ ಗ್ರಾಮದ ನವನಗರ ಪ್ರದೇಶದ ಮಾರಿಕಾಂಬಾ ಹೊಟೇಲ್ ಬಳಿ ಮಾರ್ಚ 23ರ ರಾತ್ರಿ ಮಾರಾಮಾರಿ ನಡೆದಿದೆ. ಚಾಕು-ಚೂರಿ ಹಿಡಿದು ಎರಡು ಗುಂಪಿನ ಜನ ಹೊಡೆದಾಟ ನಡೆಸಿದ್ದಾರೆ.
ಸಚಿನ ಮಾರುತಿ ಕೊರವರ, ವಿಶಾಲ್ ನಿಂಗಪ್ಪ ಹಾರುಗೊಪ್ಪ ಹಾಗೂ ಇನ್ನೂ ಇಬ್ಬರಿಗೆ ಈ ಹೊಡೆದಾಟದಲ್ಲಿ ಗಾಯವಾಗಿದೆ. ಪ್ರಕರಣ ಬೆನ್ನತ್ತಿದ ಪೊಲೀಸರು ಹಲ್ಲೆ ನಡೆಸಿ ಪರಾರಿಯಾಗಿದ್ದ ಏಳು ಜನರನ್ನು ಹಿಡಿದಿದ್ದಾರೆ. ಹೊಡೆದಾಟಕ್ಕೆ ಬಳಸಿದ ಚಾಕು, ರಾಡುಗಳ ಜೊತೆ ನಾಲ್ಕು ಬೈಕುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಹೊಡೆದಾಟ ಪ್ರಕರಣದಲ್ಲಿ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಚಿಕಿತ್ಸೆ ಮುಂದುವರೆದಿದೆ. ದಾಂಡೇಲಿ ಉಪವಿಭಾಗದ ಪೋಲೀಸ್ ಉಪಾಧೀಕ್ಷಕರಾದ ಶಿವಾನಂದ ಮದರಖಂಡಿ ಹಾಗೂ ವೃತ್ತ ನಿರೀಕ್ಷಕರಾದ ಜಯಪಾಲ್ ಪಾಟೀಲ್ ನೇತ್ರತ್ವದಲ್ಲಿ ಆರೋಪಿಗಳ ಬಂಧನ ನಡೆದಿದೆ. ಪಿಎಸ್‌ಐ ವಿನೋದ ಎಸ್ ಕೆ, ಕೃಷ್ಣ ಗೌಡ ಅರಕೇರಿ ಆರೋಪಿಗಳ ವಿಚಾರಣೆ ನಡೆಸಿದ್ದಾರೆ.