ಶಿರಸಿಯ ಎಕ್ಕಂಬಿ ಬಳಿ ನಡೆದ ಅಪಘಾತದಲ್ಲಿ ಯಲ್ಲಾಪುರದ ರವಿ ಗೋಣಿಮಠ್ ಸಾವನಪ್ಪಿದ್ದಾರೆ.
ಯಲ್ಲಾಪುರದ ಕಾಳಮ್ಮನಗರದಲ್ಲಿ ರವಿ ಗೋಣಿಮಠ್ (35) ವಾಸವಾಗಿದ್ದರು. ಮಾರ್ಚ 22ರ ರಾತ್ರಿ ಶಿರಸಿ ಹುಬ್ಬಳ್ಳಿ ರಸ್ತೆ ಮಾರ್ಗವಾಗಿ ಅವರು ತಮ್ಮ ಬೈಕಿನಲ್ಲಿ ಸಂಚರಿಸುತ್ತಿದ್ದರು. ಶಿರಸಿಯಿಂದ ಬಿಸಿಲಕೊಪ್ಪ ಕಡೆ ಹೋಗುವಾಗ ಸಿಕ್ಕ ಎಕ್ಕಂಬಿ ಅರಣ್ಯ ಇಲಾಖೆ ತನಿಖಾ ಠಾಣೆ ಬಳಿ ಅವರ ಬೈಕ್ ಅಪಘಾತವಾಯಿತು.
ತಪಾಸಣಾ ಉದ್ದೇಶಕ್ಕಾಗಿ ರಸ್ತೆಗೆ ಅಡ್ಡ ಹಾಕಿದ್ದ ಬ್ಯಾರಿಕೇಟ್’ಗೆ ಅವರ ಬೈಕು ಗುದ್ದಿತು. ನಂತರ ಬೈಕು ಅಲ್ಲಿದ್ದ ಗೇಟಿಗೂ ಗುದ್ದಿತು. ಬೈಕಿನ ವೇಗ ಜಾಸ್ತಿಯಿಂದ ಕಾರಣ ಅಪಘಾತದ ರಭಸಕ್ಕೆ ರವಿ ಗೋಣಿಮಠ್ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಯಿತು. ಕಿವಿ ಹಾಗೂ ಮೂಗಿನಿಂದ ರಕ್ತ ಬರುತ್ತಿತ್ತು.
ಈ ಅಪಘಾತ ನೋಡಿದ ಶಿರಸಿ ಕಾನಗದ್ದೆಯ ಕೇಶವ ನಾಯ್ಕ ಅವರು ರವಿ ಗೋಣಿಮಠ್ ಅವರ ಜೀವ ಉಳಿಸುವ ಪ್ರಯತ್ನ ನಡೆಸಿದರು. ಆ ರಾತ್ರಿಯೇ ಸ್ನೇಹಿತರ ಕಾರಿನಲ್ಲಿ ಅವರನ್ನು ಕೇಶವ ನಾಯ್ಕ ಅವರು ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ರವಿ ಗೋಣಿಮಠ ಅವರನ್ನು ಹುಬ್ಬಳ್ಳಿಗೆ ಕರೆದೊಯ್ಯಲಾಯಿತು. ಆದರೆ, ಬುಧವಾರ ಬೆಳಗ್ಗೆ ಅವರು ಅಲ್ಲಿಯೇ ಸಾವನಪ್ಪಿದರು.