ಗ್ಯಾಸ್ ಸಿಲೆಂಡರ್ ಹೊತ್ತು ದಾಂಡೇಲಿಗೆ ಬರುತ್ತಿದ್ದ ವಾಹನ ಮಂಗಳವಾರ ಮರಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಗ್ಯಾಸ್ ಗಾಡಿಯಲ್ಲಿದ್ದ ಚಾಲಕನಿಗೆ ಗಾಯವಾಗಿದೆ.
ದಾಂಡೇಲಿ – ಹಳಿಯಾಳ ರಾಜ್ಯ ಹೆದ್ದಾರಿಯ ಆಲೂರು-ಕರ್ಕಾ ನಡುವೆ ಈ ಅಪಘಾತ ನಡೆದಿದೆ. ಬೆಳಗಾವಿಯ ಹುಕ್ಕೇರಿ ತಾಲೂಕಿನ ಅಮಿನಭಾವಿ ಗ್ರಾಮದ ವಿನಕ ಚಾಟಿ ಗ್ಯಾಸ್ ಲಾರಿ ಓಡಿಸುತ್ತಿದ್ದರು. ಅಪಘಾತದ ರಭಸಕ್ಕೆ ಮರದ ಅಡಿ ಲಾರಿ ಸಿಕ್ಕಿ ಬಿದ್ದಿದೆ. ಲಾರಿಯಲ್ಲಿದ್ದ ಚಾಲಕನನ್ನು ಸ್ಥಳೀಯರು ಹರಸಾಹಸದಿಂದ ಹೊರ ತೆಗೆದಿದ್ದಾರೆ.
ಲಾರಿಯ ಬಾಗಿಲು ಒಡೆದ ಪರಿಣಾಮ ಚಾಲಕ ಹೊರ ಬಂದು ಜೀವ ಉಳಿಸಿಕೊಂಡಿದ್ದಾರೆ. 108 ಆಂಬುಲೆನ್ಸ ಮೂಲಕ ಗಾಯಾಳು ಚಿನಕ ಚಾಟಿ ಅವರನ್ನು ದಾಂಡೇಲಿ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ.