ವರದಕ್ಷಿಣೆಗಾಗಿ ಪೀಡಿಸಿದ ಪತಿಯ ವಿರುದ್ಧ ಮಹಿಳೆ ಸಿಡಿದೆದ್ದಿದ್ದಾರೆ. `ತನಗೆ ನ್ಯಾಯ ಕೊಡಿಸಿ’ ಅವರು ಪೊಲೀಸರ ಮೊರೆ ಹೋಗಿದ್ದಾರೆ.
ಶಿರಸಿ ತಾಲೂಕಿನ ಬಸಳೆಕೊಪ್ಪ ಗ್ರಾಮದ ಹಿತ್ಲಗದ್ದೆಯ ಪವಿತ್ರ ನಾಯ್ಕ ಅವರು ತಮ್ಮ ಪತಿ ಉದಯ ನಾಯ್ಕ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ. ಪತಿ ಉದಯ ನಾಯ್ಕ ಸೇರಿ ಮತ್ತೆ ನಾಲ್ವರ ವಿರುದ್ಧ ಅವರು ದೂರಿದ್ದಾರೆ.
ಉದಯ ನಾಯ್ಕ ಅವರಿಂದ ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸುತ್ತಿರುವುದಾಗಿ ಪವಿತ್ರ ನಾಯ್ಕ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ವರದಕ್ಷಿಣೆ ಕೊಡಲಿಲ್ಲ ಎಂಬ ಕಾರಣಕ್ಕೆ ಪದೇ ಪದೇ ಹಿಂಸೆ ನೀಡಿರುವುದಾಗಿಯೂ ಅವರು ವಿವರಿಸಿದ್ದಾರೆ.
ಇನ್ನೂ ಬಸಳೆಕೊಪ್ಪದ ಉದಯ ಸುರೇಂದ್ರ ನಾಯ್ಕ, ಸುರೇಂದ್ರ ಕೃಷ್ಣಾ ನಾಯ್ಕ, ಕಾತ್ಯಾಯನಿ ಸುರೇಂದ್ರ ನಾಯ್ಕ ಹಾಗೂ ಮೈಸೂರಿನಲ್ಲಿರುವ ದಿವ್ಯಾ ಕೃಷ್ಣಾ ನಾಯ್ಕ ಕಿರುಕುಳ ನೀಡಿದ ಬಗ್ಗೆ ಪವಿತ್ರ ನಾಯ್ಕ ಆರೋಪಿಸಿದ್ದಾರೆ. ಮಹಿಳೆಯ ಅಳಲು ಆಲಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಸಿದ್ದಾರೆ.